ಬಂಟ್ವಾಳ ಮೇ 18: ಪರಂಗಿಪೇಟೆಯಲ್ಲಿ ಕಾರ್ಯಾಚರಣೆಯಲ್ಲಿದ್ದ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಫರಂಗಿಪೇಟೆಯ ಮಾರಿಪಳ್ಳ ನಿವಾಸಿಗಳಾದ ಹಸನಬ್ಬ ಮತ್ತು ಮನ್ಸೂರ್ ಬಂಧಿತ ಆರೋಪಿಗಳು.
ಬಂಟ್ವಾಳದ ಪರಂಗಿಪೇಟೆಯ ಅಮ್ಮೆಮಾರ್ ಎಂಬಲ್ಲಿ ಈ ಅಕ್ರಮ ಕಸಾಯಿಖಾನೆ ಕಾರ್ಯಾಚರಿಸುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಬಂಟ್ವಾಳ ಪೊಲೀಸರು ಕಾರ್ಯಾಚರಣೆ ನಡೆಸಿ 11 ಹಸುವಿನ ಚರ್ಮ, ಒಂದು ಕರು ಸೇರಿದಂತೆ, ನಾಲ್ಕು ದನಗಳ ರಕ್ಷಣೆ ಮಾಡಿದ್ದಾರೆ.
ಈ ದಾಳಿಯಲ್ಲಿ ಐಪಿಎಸ್ ಅಕ್ಷಯ್ ಎಂ. ಹಾಕೆ, ಪ್ರಕಾಶ್, ಬಂಟ್ವಾಳ ಠಾಣಾ ಎಸೈ ಪ್ರಸನ್ನ, ವಿಶಾಲಕ್ಷಿ, ಬಶೀರ್, ನಝೀರ್, ಸುರೇಶ್, ಜನಾರ್ದನ, ನಾಗನಾಥ್ ಮೊದಲಾದವರಿದ್ದರು.