ಮಂಗಳೂರು, ಅ. 10 (DaijiworldNews/HR) : ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ಅಂತರಾಜ್ಯ ಮತ್ತು ವಿದೇಶಿಯ ಏರ್ ಇಂಡಿಯಾ ವಿಮಾನಗಳು ಅಕ್ಟೋಬರ್ 12 ಮತ್ತೆ ಮುಂಬೈ-ಮಂಗಳೂರು ಸಂಚಾರ ಪ್ರಾರಂಭಿಸಲಿದೆ.

ಏರ್ ಇಂಡಿಯಾ ಮೂಲಗಳ ಪ್ರಕಾರ, ವಿಮಾನಯಾನವು ವಾರದಲ್ಲಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಕಾರ್ಯನಿರ್ವಹಿಸಲು ನಿರ್ಧರಿಸಿದೆ.
ವಿಮಾನ ಎಐ 679 ಮುಂಬೈಯಿಂದ ಬೆಳಿಗ್ಗೆ 10.15 ಕ್ಕೆ ಹೊರಟು ಮಧ್ಯಾಹ್ನ 12.00 ಕ್ಕೆ ಮಂಗಳೂರಿಗೆ ತಲುಪಲಿದೆ.
ಮಂಗಳೂರಿನಿಂದ ನಿರ್ಗಮನ ವಿಮಾನ ಎಐ 680 ಮಧ್ಯಾಹ್ನ 12.40 ಕ್ಕೆ ಹೊರಟು ಮುಂಬೈಗೆ ಮಧ್ಯಾಹ್ನ 2.20 ಕ್ಕೆ ತಲುಪಲಿದೆ.