ಕಾಸರಗೋಡು, ಅ. 10 (DaijiworldNews/MB) : ನೀಲೇಶ್ವರದಲ್ಲಿ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಯೋರ್ವರು ಇಂದು ಮೃತಪಟ್ಟಿದ್ದು, ಇದರಿಂದ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ.

ಕೋಜಿಕ್ಕೋಡ್ನ ಪ್ರವೀಣಾ ( 60) ಮೃತಪಟ್ಟವರು. ಕಣ್ಣೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಮಧ್ಯಾಹ್ನ ಮೃತಪಟ್ಟರು.
ಅಪಘಾತದಲ್ಲಿ ಬೇಡಡ್ಕ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ತ್ರಿಶ್ಯೂರಿನ ಪೌಲ್ ಗ್ಲೆಟ್ಟೋ ಮೆರೋಕೊ (49) ಮೃತ ಪಟ್ಟಿದ್ದರು. ನೀಲೇಶ್ವರ ಕರುವೇಚ್ಚೆರಿ ಬಳಿ ಕಾರು ಕಾಂಕ್ರೀಟ್ ಗೋಡೆಗೆ ಬಡಿದು ಅಪಘಾತ ನಡೆದಿತ್ತು. ಪೌಲ್ ಗ್ಲೆಟ್ಟೋ ಮೆರೋಕೊ ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದರು.
ಕಾರಲ್ಲಿದ್ದ ಜ್ಯೂನಿಯರ್ ಹೆಲ್ತ್ ಇನ್ಸ್ ಪೆಕ್ಟರ್ ಪ್ರದೀಪ್, ಆಸ್ಪತ್ರೆ ಅಸಿಸ್ಟೆಂಟ್ ಸರ್ಜನ್ ಡಾ. ದಿನು ಗಗನ್, ದಿನುರವರ ತಾಯಿ ಪ್ರವೀಣಾ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದರು. ಡಾ. ದಿನು ಗಗನ್ರವರ ತಾಯಿ ಪ್ರವೀಣಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.