ಉಡುಪಿ, ಅ. 10(DaijiworldNews/PY): ಚುನಾವಣೆಯ ವಿಚಾರದಲ್ಲಿ ಡಿ.ಕೆ.ರವಿ ಅವರ ವಿಚಾರದ ಪ್ರಸ್ತಾಪ ಒಳ್ಳೆಯದಲ್ಲ. ಅವರ ಹೆಸರನ್ನು ಯಾರೇ ಬಳಸಿಕೊಂಡರೂ ಕೂಡಾ ಅವರಿಗೆ ಒಳ್ಳೆಯದಾಗುವುದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ರವಿ ಅವರು ಓರ್ವ ದಕ್ಷ ಅಧಿಕಾರಿ. ಆದರೆ, ಇಂದು ಅವರು ನಮ್ಮೊಂದಿಗಿಲ್ಲ. ಅವರ ಹೆಸರನ್ನು ಯಾರೂ ಕೂಡಾ ಬಳಸಿಕೊಂಡರು ಅವರಿಗೆ ಒಳ್ಳೆಯದಾಗಲ್ಲ ಎಂದಿದ್ದಾರೆ.
ರವಿ ಅವರ ವಿಚಾರದ ಬಗ್ಗೆ ಅವರ ಪತ್ನಿಯ ಬಗ್ಗೆ ಚರ್ಚೆ ಮಾಡುವ ಅಗತ್ಯ ಇಲ್ಲ. ಡಿ.ಕೆ.ರವಿ ಅವರು ಬದುಕಿದ್ದ ಸಂದರ್ಭ ಕುಸುಮಾ ಅವರ ಕುಟುಂಬ ಏನು ಮಾಡಿತ್ತು? ರವಿ ಅವರ ಮಾವ ಎಲ್ಲಿಗೆ ಹೋದರು? ಎನ್ನುವ ವಿಚಾರದ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ, ಈ ವಿಚಾರವಾಗಿ ರವಿ ಅವರ ಹೆಸರನ್ನು ಪ್ರಸ್ತಾಪ ಮಾಡದೇ ಇರುವುದು ಉತ್ತಮ ಎಂದು ಕೆಂಡಾಕಾರಿದರು.
ಚುನಾವಣೆಯ ಈ ಸಂದರ್ಭ ಡಿ.ಕೆ.ರವಿ ಅವರ ವಿಚಾರ ಪ್ರಸ್ತಾಪಿಸುವುದು ಒಳ್ಳೆಯದಲ್ಲ. ಒಂದು ವೇಳೆ ಅವಳು ಚರ್ಚೆ ತೆಗೆದರೆ ನಮ್ಮ ಬಳಿಯೂ ಚರ್ಚಿಸಲು ಸಾಕಷ್ಟು ವಿಷಯಗಳಿವೆ ಎಂದು ತಿಳಿಸಿದ್ದಾರೆ.