ಕಾಸರಗೋಡು , ಅ. 10(DaijiworldNews/PY): ಜಿಲ್ಲೆಯಲ್ಲಿ ಶನಿವಾರ 539 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ನಾಲ್ಕು ಮಂದಿ ಮೃತಪಟ್ಟಿದ್ದಾರೆ.

ಇಂದು ಕೊರೊನಾ ದೃಢಪಟ್ಟ 539 ಮಂದಿಯ ಪೈಕಿ 517 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೊಂಕು ದೃಢಪಟ್ಟಿದ್ದು, ಮೊದಲ ಬಾರಿಗೆ ಸೋಂಕಿತರ ಸಂಖ್ಯೆ 500ರ ಗಡಿ ದಾಟಿದೆ.
ಇದುವರೆಗೆ 14,465 ಮಂದಿಗೆ ಸೋಂಕು ದೃಢಪಟ್ಟಿದೆ. ಸದ್ಯ 4,180 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.