ಮಂಗಳೂರು, ಅ. 10 (DaijiworldNews/MB) : ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಡೆದ ಹಗರಣದ ಬಗ್ಗೆ ಎಸಿಬಿ ಅಥವಾ ಲೋಕಾಯುಕ್ತ ತನಿಖೆ ನಡೆಸುವಂತೆ ಒತ್ತಾಯಿಸಿರುವ ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾರವರ ಬೇಡಿಕೆಯನ್ನು ಸ್ವಾಗತಿಸುವುದಾಗಿ ಮಂಗಳೂರು ನಗರ ಪಾಲಿಕೆಯ ಆಡಳಿತ ಪಕ್ಷ ಬಿಜೆಪಿ ತಿಳಿಸಿದೆ.


ಮೇಯರ್ ದಿವಾಕರ್ ಪಾಂಡೇಶ್ವರ ಅನುಪಸ್ಥಿತಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು ಅವರು, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಂದಾಜು ವೆಚ್ಚಕ್ಕಿಂತ ಮೂರು ಪಟ್ಟು ಹೆಚ್ಚು ವೆಚ್ಚದ ಉಲ್ಲೇಖವಿದೆ ಎಂದು ಐವನ್ ಡಿಸೋಜಾರವರು ಆರೋಪಿಸಿದ್ದಾರೆ. ಎರಡೂವರೆ ವರ್ಷಗಳಿಂದ ಈ ಯೋಜನೆ ಅನುಷ್ಠಾನದಲ್ಲಿದೆ. ಮಂಗಳೂರು ನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಈ ಅಂದಾಜು ವೆಚ್ಚದ 60% ಕ್ಕಿಂತ ಹೆಚ್ಚು ತಯಾರಿಸಲಾಯಿತು. ಕಾಂಗ್ರೆಸ್ ಆಡಳಿತದ ಸಂದರ್ಭದ ಶಾಸಕ ಮತ್ತು ಸಚಿವರು ಸ್ವತಃ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ನಾವು ಅನುಮಾನಿಸುತ್ತೇವೆ. ಐವನ್ ಡಿಸೋಜ ಪ್ರಸ್ತಾಪಿಸಿದಂತೆ ಎಸಿಬಿ ಅಥವಾ ಲೋಕಾಯುಕ್ತಾ ಅವರ ತನಿಖೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
"ಸ್ಮಾರ್ಟ್ ಸಿಟಿ ಯೋಜನೆಯು ಜಾರಿಗೆ ತನ್ನದೇ ಆದ ವೇದಿಕೆಯನ್ನು ಹೊಂದಿದೆ. ಯೋಜನೆಯ ಎಂಡಿಯು ಐದು ಕೋಟಿ ರೂ.ಗಳ ಅಂದಾಜು ವೆಚ್ಚದವರೆಗಿನ ಯಾವುದೇ ಕೆಲಸವನ್ನು ಮಂಜೂರು ಮಾಡಬಹುದು. ಉನ್ನತ ಸಮಿತಿಯಿಂದ 50 ಕೋಟಿ ವರೆಗೆ ಅನುಮೋದನೆ ಮತ್ತು 50 ರಿಂದ 200 ಕೋಟಿ ರೂ. ಕ್ಯಾಬಿನೆಟ್ ಅನುಮೋದನೆ ನೀಡಬೇಕಾಗಿದೆ. ಅಂದಾಜು ವೆಚ್ಚವನ್ನು ಪಿಡಬ್ಲ್ಯೂಡಿಯ ಎಸ್ಆರ್ ದರದ ಮೂಲಕ ಮಾಡಲಾಗುತ್ತದೆ. ಪ್ರಸ್ತುತ, ಪಾಲಿಕೆಯ ಎಂಟು ವಾರ್ಡ್ಗಳಲ್ಲಿ, ಸ್ಮಾರ್ಟ್ ಸಿಟಿ ಕಾರ್ಯ ನಡೆಯುತ್ತಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಕೈಗೊಳ್ಳುವ ಕಾರ್ಯಗಳು ಸೇರಿದಂತೆ ತನಿಖೆ ನಡೆಯಲಿ, ಹಗರಣ ಬೆಳಕಿಗೆ ಬರುತ್ತದೆ ಎಂದು ಹೇಳಿದ್ದಾರೆ.
ಶಕ್ತಿನಗರದಲ್ಲಿ ನಿವೇಶನ ಯೋಜನೆಯಲ್ಲಿ ವಿಳಂಬವಾಗಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಪಾಲಿಕೆ ಮುಖ್ಯ ಸಚೇತಕರಾದ ಪ್ರೇಮಾನಂದ ಶೆಟ್ಟಿ ಅವರು, "ಕಾಂಗ್ರೆಸ್ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದ ಕಾರ್ಯಗಳನ್ನು ನಾವು ಕೈಗೆತ್ತಿಕೊಂಡಿದ್ದರಿಂದ ಕಾಂಗ್ರೆಸ್ ಹೀಗೆ ಆರೋಪ ಮಾಡುತ್ತಿದೆ. ನಮ್ಮ ಪಕ್ಷವು ಅರಣ್ಯ ಇಲಾಖೆಯ ಅಡೆತಡೆಗಳನ್ನು ತೋರಿಸಿ ಬಡ ಜನರಿಗೆ ವಸತಿ ಸೌಲಭ್ಯವನ್ನು ನೀಡಲು ವಿಳಂಬ ಮಾಡುತ್ತಿದೆ ಎಂದು ಐವನ್ ಅವರು ಆರೋಪಿಸಿದ್ದಾರೆ. ಆದರೆ ವಾಸ್ತವದಲ್ಲಿ ಕಾಂಗ್ರೆಸ್ ಜನರಿಗೆ ಹಕ್ಕು ಪತ್ರವನ್ನು ನೀಡಿ ಮೋಸ ಮಾಡಿದೆ. ಅದು ಎಂಸಿಸಿ ಚುನಾವಣಾ ಸಲುವಾಗಿ ಕಾಂಗ್ರೆಸ್ ರಚಿಸಿದ ಕೇವಲ ಸುಳ್ಳು ಭರವಸೆಯಷ್ಟೇ. ಶಾಸಕ ವೇದವ್ಯಾಸ್ ಕಾಮತ್ ಅವರು ಆಶ್ರಯ ಸಮಿತಿಯ ಅಧ್ಯಕ್ಷರಾಗಿ ಹಲವಾರು ಸಭೆಗಳನ್ನು ನಡೆಸಿದ್ದಾರೆ. ಅರಣ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.
"ವಸತಿ ಸೌಲಭ್ಯಕ್ಕಾಗಿ ನಿಗದಿಪಡಿಸಿದ ಪ್ರದೇಶದಲ್ಲಿ ಮರಗಳನ್ನು ಕಡಿಯಬಾರದು ಎಂಬ ಷರತ್ತಿನ ವಿರುದ್ಧ 60 ಲಕ್ಷ ರೂಪಾಯಿಗಳನ್ನು ಅರಣ್ಯ ಇಲಾಖೆಗೆ ಜಮಾ ಮಾಡಲಾಗುತ್ತದೆ. ಇತರೆ ಷರತ್ತುಗಳಾದ ಸ್ಥಳೀಯ ಸಂಸ್ಥೆಗಳು ಜಾಗವನ್ನು ಬಳಸಿಕೊಳ್ಳಲು ಬಯಸಿದರೆ, ಎರಡು ಪಟ್ಟು ಭೂಪ್ರದೇಶವನ್ನು ಇಟ್ಟುಕೊಳ್ಳುವುದನ್ನು ಪೂರೈಸುವ ಸಲುವಾಗಿ ತೆಂಕ ಎಡಪಡವಿನಲ್ಲಿರುವ 20 ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತಿದೆ. ಕೇಂದ್ರವು ಅನುಮೋದನೆ ನೀಡಿದ ನಂತರ, ತಕ್ಷಣವೇ ಟೆಂಡರ್ ಕರೆಯಲಾಗುವುದು. ಮೊದಲ ಹಂತದಲ್ಲಿ 125 ಮನೆಗಳನ್ನು ನಿರ್ಮಿಸಲು ಮೊದಲೇ ಕರೆಯಲಾಗಿದ್ದ ಟೆಂಡರ್ ರದ್ದುಗೊಂಡಿದೆ ಅರಣ್ಯ ಇಲಾಖೆ ಎನ್ಒಸಿಗೆ ನೀಡಿದ ಕೂಡಲೇ ಮೊದಲ ಹಂತದ ಕಾಮಗಾರಿ ಪ್ರಾರಂಭವಾಗಲಿದೆ. ಈ ಯೋಜನೆಯನ್ನು ಎಂಟು ಹಂತಗಳಲ್ಲಿ ಕೈಗೊಳ್ಳಲಾಗುವುದು. ಕೇಂದ್ರ ಮತ್ತು ರಾಜ್ಯ ವಸತಿ ಯೋಜನೆ, ಬ್ಯಾಂಕ್ ಮತ್ತು ಎಂಸಿಸಿ ಅಡಿಯಲ್ಲಿ ಫಲಾನುಭವಿಗಳಿಂದ ಹಣವನ್ನು ಈ ಅನುಷ್ಠಾನಕ್ಕೆ ಬಳಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಉಪ ಮೇಯರ್ ವೇದಾವತಿ ಉಪಸ್ಥಿತರಿದ್ದರು.