ಉಡುಪಿ, ಅ. 10 (DaijiworldNews/MB) : "ದೇಶ ವಿಚಿತ್ರ ಸನ್ನಿವೇಶ ಎದುರಿಸುತ್ತಲೇ ಇದೆ. ಮಾಸ್ಕ್ ಹಾಕಿಕೊಂಡು ಜೀವನ ನಡೆಸಬೇಕಾಗುತ್ತದೆ ಎಂದು ಯಾರು ಊಹಿಸಿರಲಿಲ್ಲ, ಮೊದಲು ವೈರಸ್ ಚೀನಾದಲ್ಲಿ ಪತ್ತೆಯಾಗಿದ್ದರೂ ಹೊರಜಗತ್ತಿಗೆ ತಿಳಿಸಿರಲಿಲ್ಲ. ಅಲ್ಲಿ ಎಷ್ಟೆಷ್ಟು ಸೋಂಕಿತರು ಮರಣ ಹೊಂದಿದ್ದಾರೆ ಎನ್ನುವ ದಾಖಲೆ ಇನ್ನು ಹೊರಗೆ ಬಿದ್ದಿಲ್ಲ, ಮಾಧ್ಯಮವನ್ನು ಚೀನಾದ ಕಮ್ಯೂನಿಸ್ಟ್ ಸರಕಾರ ನಿಯಂತ್ರಣದಲ್ಲಿಟ್ಟಿದೆ. ಪ್ರಪಂಚದ ಬೇರೆ ದೇಶಗಳು ಭಾರತದ ಬಗ್ಗೆ ತುಂಬಾ ತಪ್ಪು ಭಾವನೆ ಹೊಂದಿತ್ತು. ಆದರೆ ನಮ್ಮ ಕೇಂದ್ರ ಸರಕಾರ ಕೋವಿಡ್ ನಿರ್ವಹಣೆ ಯಶಸ್ವಿಯಾಗಿ ಮಾಡಿತು" ಎಂದು ಉಡುಪಿ- ಚಿಕ್ಕ ಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.







ಅವರು ಶನಿವಾರ ಅಕ್ಟೊಬರ್ 10 ರಂದು ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ನಡೆದ ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತ, "ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ಭಾರತದಲ್ಲಿ ಸಾವು ಹೆಚ್ಚಾಗುತ್ತದೆ ಎಂದೇ ಭಾವಿಸಿತ್ತು. ಇಂತಹ ಸಂದರ್ಭದಲ್ಲಿ ಮೋದಿ ಅಲ್ಲದೆ ಬೇರೆ ಯಾರು ಪ್ರಧಾನಿ ಸ್ಥಾನದಲ್ಲಿ ನಿಂತು ನಿರ್ವಹಿಸಲು ಅಸಾಧ್ಯವಾಗುತ್ತಿತ್ತು. ಪ್ರಧಾನಿಯವರು ಲಾಕ್ಡೌನ್ ಬಹಳ ದುಃಖದಿಂದಲೇ ಮಾಡಿದ್ದಾರೆ. ಆದರೆ ಭಾರತದಲ್ಲಿ ಯಾವುದೇ ವಿಷಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಪ್ರತಿದಿನ ಕೋವಿಡ್ ಬಗೆಗಿನ ವಿವರವನ್ನು ಆನ್ಲೈನ್ ಮುಖಾಂತರ ಅಪ್ ಡೇಟ್ ಮಾಡಲಾಗುತ್ತದೆ" ಎಂದು ಹೇಳಿದರು.
"ಉಡುಪಿ ವೈದ್ಯಕೀಯ ಸೌಲಭ್ಯ ಒದಗಿಸುವಲ್ಲಿ ಸುಸಜ್ಜಿತ ಜಿಲ್ಲೆಯಾಗಿದೆ. ಮೋದಿಯವರು ಲಾಕ್ಡೌನ್ ಸಮಯದಲ್ಲಿ ಹಲವಾರು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದವು. ಮೋದಿ ಓರ್ವ ರಾಜಕೀಯ ಋಷಿ. 20 ವರ್ಷ ನಿರಂತರ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಯಶಸ್ವಿ ರಾಜಕೀಯದಲ್ಲಿ ಹೆಜ್ಜೆ ಹಾಕಿದ್ದಾರೆ. ರಾಮ ಮಂದಿರದ ವ್ಯಾಜ್ಯ ಪರಿಹಾರ, ಜಮ್ಮು ಕಾಶ್ಮೀರ ಭೂ ಸಂಘರ್ಷ, ಟ್ರಿಪಲ್ ತಲಾಖ್ ಹೀಗೆ ಹಲವಾರು. ಹಿಂದುವೇತರ ರಾಷ್ಟ್ರದಲ್ಲಿ ಹಿಂದೂಗಳು ಹಿಂದುಗಳಾಗಿ ಉಳಿದಿರಲಿಲ್ಲ. ಮತಾಂತರ ಅಥವಾ ಸಾವು ಮಾತ್ರ ಆಯ್ಕೆ ಇತ್ತು ಯುವತಿಯರನ್ನು ಕೂಡಿ ಹಾಕಿ ಅತ್ಯಾಚಾರ ಮಾಡಲಾಯ್ತು. ಅಂತ ಕೆಟ್ಟ ವ್ಯವಸ್ಥೆ ಆ ದೇಶದಲ್ಲಿತ್ತು. ಮುಸ್ಲಿಂ ರಾಷ್ಟ್ರದಲ್ಲಿ ಅವರು ಭಿಕ್ಷುಕರಂತೆ ವಾಸ ಮಾಡುತ್ತಿದ್ದರು. ಯಾವ ನಾಗರೀಕ ಸೌಲಭ್ಯ ಇರಲಿಲ್ಲ. ಅಂತವರಿಗೆ ಪೌರತ್ವ ನೀಡಿ ಗೌರವಿಸಿದ್ದು ಸಿಎಎಬಿಲ್. ಅಮಿತ್ ಶಾ ರ 370 ನೇ ವಿಧಿಯನ್ನು ರದ್ದು ಮಾಡುವ ಒಂದು ದಿಟ್ಟ ನಿರ್ಧಾರದಿಂದ ಈಗ ಸೈನಿಕರು ಹೇಳಿದಂತೆ ಭಾರತದ ಗಡಿಯಲ್ಲಿ ನಡೆಯುತ್ತೆ" ಎಂದರು
ಕುಯ್ಲಾಡಿ ಸುರೇಶ್ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷರು, ಮಟ್ಟಾರು ರತ್ನಾಕರ್ ಹೆಗ್ಡೆ, ಅಧ್ಯಕ್ಷರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಉದಯ್ ಕುಮಾರ್ ಶೆಟ್ಟಿ, ಮಂಗಳೂರು ವಿಭಾಗ ಪ್ರಭಾರಿ, ಗೋಪಾಲ್ ಕೃಷ್ಣಾ ಹೆಗ್ಡೆ, ಕುತ್ಯಾರ್ ನವೀನ್ ಶೆಟ್ಟಿ, ಪ್ರಸಾದ್ ಕುಮಾರ್ , ಮನೋಹರ್ ಕಲ್ಮಾಡಿ ಮೊದಲವರು ಉಪಸ್ಥಿತರಿದ್ದರು.