ಮಂಗಳೂರು, ಅ. 10 (DaijiworldNews/MB) : ಮಕ್ಕಳಿಗೆ ನಿದ್ದೆ ಮಾತ್ರೆ ತಿನ್ನಿಸಿ ತಾಯಿ ನೇಣಿಗೆ ಶರಣಾದ ದಾರುಣ ಘಟನೆ ಶಕ್ತಿನಗರದ ಪ್ರೀತಿ ನಗರದಲ್ಲಿ ನಡೆದಿದೆ.

ಪ್ರಮೀಳಾ (38) ಆತ್ಮಹತ್ಯೆ ಮಾಡಿಕೊಂಡಿದ್ದು ಆಕೆಯ ಹತ್ತು ತಿಂಗಳ ಮಗು ಐಷಾನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ.
ಪ್ರಮೀಳಾ ಬೆಳಗ್ಗೆ ಚಹಾದಲ್ಲಿ ಅಜ್ಜಿ ಮತ್ತು ಮಕ್ಕಳಿಗೆ ನಿದ್ದೆ ಮಾತ್ರೆ ಕೊಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ಸಂಜೆ ನಿದ್ರೆಯಿಂದ ಎಚ್ಚೆತ್ತ ಅಜ್ಜಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಇನ್ನು ಪ್ರಮೀಳಾ ಬರೆದಿರುವ ಡೆತ್ ನೋಟ್ ಪತ್ತೆಯಾಗಿದ್ದು, ಸ್ವ ಇಚ್ಛೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ನೋಟ್ನಲ್ಲಿ ತಿಳಿಸಿದ್ದಾರೆ.
ಕಂಕನಾಡಿ ನಗರ ಠಾಣೆ ಪೊಲೀಸರಿಂದ ಪರಿಶೀಲನೆ ನಡೆಸಿದ್ದಾರೆ.