ಮೂಡುಬಿದಿರೆ, ಅ. 11 (DaijiworldNews/PY): ಕಾರಿನಲ್ಲಿ ಗೋಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸ್ ಫೈರಿಂಗ್ ನಡೆಸಿದ ಘಟನೆ ಮೂಡುಬಿದ್ರೆಯ ಶಿರ್ತಾಡಿ ಬಳಿಯ ಔದಾಲ್ ಎಂಬಲ್ಲಿ ನಡೆದಿದೆ.



ಕಾರಿನಲ್ಲಿ ಗೋಸಾಗಾಟ ಮಾಡುತ್ತಿದ್ದ ಸಂದರ್ಭ ಪೊಲೀಸರು ಕಾರು ನಿಲ್ಲಿಸಲು ಸೂಚಿಸಿದ್ದರು. ಆದರೆ, ಆರೋಪಿಗಳು ಪೊಲೀಸರ ಸೂಚನೆಯನ್ನು ತಿರಸ್ಕರಿಸಿ, ಪೊಲೀಸ್ ಜೀಪಿಗೆ ಡಿಕ್ಕಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಕಾರನ್ನು ಬೆನ್ನಟ್ಟಿದ ಪೊಲೀಸ್ ಇನ್ಸ್ಪೆಕ್ಟರ್ ದಿನೇಶ್ ಅವರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಪೊಲೀಸ್ ಫೈರಿಂಗ್ ಕೇಳಿದ ಇಬ್ಬರು ಆರೋಪಿಗಳು ಕಾರು ಹಾಗೂ ದನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ಕಾರು ಹಾಗೂ ಅದರಲ್ಲಿದ್ದ ಆರು ದನಗಳನ್ನು ವಶಪಡಿಸಿಕೊಂಡಿದ್ದಾರೆ.