ಕಾಸರಗೋಡು, ಅ. 12 (DaijiworldNews/PY): ನಿಂತಿದ್ದ ಟ್ಯಾಂಕರ್ನ ಹಿಂಭಾಗಕ್ಕೆ ಕಾರೊಂದು ಡಿಕ್ಕಿ ಹೊಡೆದು ಸವಾರ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಮಲಪ್ಪುರಂನ ಕೊಯಿಲಾಂಡಿ ಎಂಬಲ್ಲಿ ನಡೆದಿದೆ.

ಮೃತಪಟ್ಟವರನ್ನು ಬಂದ್ಯೋಡಿನ ಫಾಸಿಲ್ (26) ಎಂದು ಗುರುತಿಸಲಾಗಿದೆ. ಜೊತೆಗಿದ್ದ ಈತನ ಸ್ನೇಹಿತ ಉಳ್ಳಾಲದ ಝುಲ್ಫಾನ್ ಮಲಿಕ್ (29) ಗಾಯಗೊಂಡಿದ್ದು, ಕೋಜಿಕ್ಕೋಡ್ನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿಲ್ಲಿಸಿದ್ದ ಟ್ಯಾಂಕರ್ನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಶನಿವಾರ ರಾತ್ರಿ ಕಾರು ಖರೀದಿಸಲು ಫಾಸಿಲ್ ಸೇರಿದಂತೆ ಒಂದು ಕಾರಿನಲ್ಲಿ ಐವರು ಕೊಯಿಲಾಂಡಿಗೆ ತೆರಳಿದ್ದರು. ಕಾರು ಖರೀದಿಸಿ ಮರಳುತ್ತಿದ್ದಾಗ ಮುಂಜಾನೆ 1.30ರ ಸುಮಾರಿಗೆ ಈ ಅಪಘಾತ ನಡೆದಿದೆ. ಫಾಸಿಲ್ ಮತ್ತು ಮಲಿಕ್ ಒಂದು ಕಾರಿನಲ್ಲಿ ಹಾಗೂ ಇನ್ನೊಂದು ಕಾರಿನಲ್ಲಿ ಇತರ ಮೂವರು ಸ್ನೇಹಿತರು ಊರಿಗೆ ಮರಳುತ್ತಿದ್ದರು. ಖರೀದಿಸಲಾಗಿದ್ದ ಕಾರನ್ನು ಫಾಸಿಲ್ ಚಲಾಯಿಸುತ್ತಿದ್ದರು.
ಅಪಘಾತದ ಸುದ್ದಿ ತಿಳಿದು ಸಂಬಂಧಿಕರು ಕೊಯಿಲಾಂಡಿಗೆ ತೆರಳಿದ್ದಾರೆ.