ಮಂಗಳೂರು, ಅ. 13 (DaijiworldNews/HR): ಕಾರಿನಲ್ಲಿ ಕುಳಿತು ನಕಲಿ ನೋಟುಗಳನ್ನು ಮಾರಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಉಳ್ಳಾಲ ಪೊಲೀಸರು ಬೀಚ್ ಸಮೀಪದಿಂದ ಬಂಧಿಸಲಾಗಿದ್ದು, ಈ ಅಪರಾಧದಲ್ಲಿ ಭಾಗಿಯಾಗಿದ್ದ ಇತರ ಇಬ್ಬರು ಪರಾರಿಯಾಗಿದ್ದಾರೆ.


ಬಂಧಿತ ನಾಲ್ವರನ್ನು ಸೈಯದ್ ಹಕೀಬ್, ಫೈಸಲ್ ಖಾನ್, ಮೊಹಮ್ಮದ್ ಜಮಾನ್ ಮತ್ತು ಹ್ಯಾರಿಸ್ ಎಂದು ಗುರುತಿಸಲಾಗಿದ್ದು, ಪರಾರಿಯಾದವರು ಸಲೀಮ್ ಮತ್ತು ರಂಜಿತ್ ಎಂದು ತಿಳಿದು ಬಂದಿದೆ.
ಬೀಚ್ನಲ್ಲಿ ನಿಲ್ಲಿಸಿದ್ದ ಬೆಂಗಳೂರು ನೋಂದಣಿ ಸಂಖ್ಯೆಯ ಕಾರಿನ ಕಡೆಗೆ ಪೊಲೀಸರು ಹೋದಾಗ, ಅಲ್ಲಿನ ಯುವಕರ ತಂಡ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ಕಾರಿನ ಹತ್ತಿರ ಬಂದಾಗ, ಇಬ್ಬರು ಪರಾರಿಯಾಗಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಕಾರಿನ ಹತ್ತಿರ ಬಂದು ನಾಲ್ವರು ಯುವಕರನ್ನು ಹತ್ತಿರದ ಉಳ್ಳಾಲ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಬಳಿಕ ಯುವಕರನ್ನು ಪ್ರಶ್ನಿಸುವಾಗ ನಕಲಿ ಕರೆನ್ಸಿ ನೋಟುಗಳನ್ನು ಮಾರಾಟ ಮಾಡಲು ಅಲ್ಲಿಗೆ ಬಂದಿರುವುದಾಗಿ ಒಪ್ಪಿಕೊಂಡರು.
ಗ್ಯಾಂಗ್ ಸದಸ್ಯರ ವಶದಲ್ಲಿದ್ದ ಕಾರು, ಐದು ಮೊಬೈಲ್ ಫೋನ್ ಮತ್ತು 2.4 ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.