ಮಂಗಳೂರು, ಅ. 13 (DaijiworldNews/MB) : ಬಜರಂಗ ದಳದ ಕಾರ್ಯಕರ್ತರು ಮಂಗಳವಾರ ಬೆಳಿಗ್ಗೆ ಕಾರ್ಯಚರಣೆ ನಡೆಸಿದ್ದು ಈ ಸಂದರ್ಭ ಹಾಲಿನ ವಾಹನದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.



ಹಾಲು ಸಾಗಾಟ ವಾಹನದಲ್ಲಿ ಗೋಮಾಂಸವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ತಿಳಿದ ನಂತರ, ಕಾರ್ಯಕರ್ತರು ವಾಹನವನ್ನು ಬೆನ್ನಟ್ಟಿದ್ದು ವೆನ್ಲಾಕ್ ಆಸ್ಪತ್ರೆಯ ಬಳಿ ತಡೆದು ಅದನ್ನು ಬಂದರ್ ಠಾಣೆಯ ಪೊಲೀಸರಿಗೆ ಹಸ್ತಾಂತರಿಸಿದರು.
ಅಕ್ರಮ ಗೋ ಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ಮಂಗಳವಾರ ಬೆಳಿಗ್ಗೆ ಬಜರಂಗದಳದ ಕಾರ್ಯಕರ್ತರು ಪಂಪ್ವೆಲ್ನಿಂದ ಬೆನ್ನಟ್ಟಿದ್ದರು ಎಂದು ತಿಳಿದು ಬಂದಿದೆ.