ಸುಳ್ಯ, ಅ. 13 (DaijiworldNews/MB) : ಚಿತ್ರ ಕಲಾವಿದ ಮೋಹನ ಸೋನ ಅವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಸೋಮವಾರ ರಾತ್ರಿ ನಿಧನರಾಗಿದ್ದಾರೆ.

64 ವರ್ಷವಾಗಿದ್ದ ಅವರು ಕೆಲ ಕಾಲದಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೋಹನ ಸೋನ ಅವರು ವಿಟ್ಲದ ಸಿ.ಪಿ.ಸಿ.ಆರ್.ಐ ನಲ್ಲಿ ಉದ್ಯೋಗಿಯಾಗಿದ್ದು ನಿವೃತ್ತಿ ಹೊಂದಿದ್ದಾರೆ. ಚಿತ್ರ ಕಲಾವಿದರಾಗಿ, ನಾಟಕ ನಟರಾಗಿ, ನಿರ್ದೇಶಕರಾಗಿಯೂ ಅವರು ಜನಪ್ರಿಯ ಹೊಂದಿದ್ದಾರೆ.
ಅನೇಕ ಕಡೆ ಚಿತ್ರಕಲಾ ಪ್ರದರ್ಶನಗಳನ್ನು ಮಾಡಿದ್ದ ಸೋನ ಅವರು, ಸೋಣಂಗೇರಿಯಲ್ಲಿ ಬಯಲು ಚಿತ್ರಾಲಯ ಮಾಡಿ ರಾಜ್ಯದ ಗಮನವನ್ನು ಸೆಳೆದಿದ್ದರು. ಅವರು ಚೋಮ, ನಾಳೆ ಯಾರಿಗೂ ಇಲ್ಲ ನಾಟಕಗಳಲ್ಲಿ ಅದ್ಬುತ ಅಭಿನಯ ಮಾಡಿದ್ದರು.