ಮಂಗಳೂರು, ಅ. 13 (DaijiworldNews/PY): ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ವಿರುದ್ದ ಅವಹೇಳನಕಾರಿ ಹೇಳೀಕೆ ನೀಡಿದ್ದಾರೆ ಎಂದು ಆರೋಪಿಸಿ ಉಳ್ಳಾಲ ಘಟಕದ ಹಿಂದೂ ಜಾಗರಣಾ ವೇದಿಕೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಇತ್ತೀಚೆಗೆ ತೊಕ್ಕೊಟ್ಟುವಿನಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯ ಸಂದರ್ಭ ಮಿಥುನ್ ರೈ ಅವರು ಆದಿತ್ಯನಾಥ್ ಅವರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಹಿಂದೂ ಜಾಗರಣಾ ವೇದಿಕೆ ಹೇಳಿದೆ.
ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ಕುಂಪಾಲ ಅವರು ಮಾತನಾಡಿ, ಆದಿತ್ಯನಾಥ್ ಅವರು ಕೇಸರಿ ನಿಲುವಂಗಿಯನ್ನು ಧರಿಸಲು ಅನರ್ಹರಾಗಿದ್ದಾರೆ. ಅಲ್ಲದೇ, ಅವರು ನಗರಕ್ಕೆ ಭೇಟಿ ನೀಡಿದರೆ ಮುಖಕ್ಕೆ ಮಸಿ ಬಳಿಯುವುದಾಗಿ ಹೇಳಿದ್ದರು ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಮಿಥುನ್ ರೈ ಅವರು, ಯೋಗಿ ಆದಿತ್ಯನಾಥ್ ಅವರನ್ನು ಅವಮಾನಿಸಿದ್ದಾರ ಎಂಬ ಆರೋಪವನ್ನು ಸುಳ್ಳು ಪ್ರಚಾರ ಎಂದು ತಳ್ಳಿಹಾಕಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಹಿಂದೂ ಧರ್ಮ ಹಾಗೂ ನಾಥ ಪಂಥದ ಗುರುವಾಗಿದ್ದು, ಅವರ ತಪ್ಪನ್ನು ಸಾಬೀತುಪಡಿಸಿದರೆ, ಅವರು ತಕ್ಷಣ ರಾಜಕೀಯದಿಂದ ನಿವೃತ್ತರಾಗುತ್ತಾರೆ. ಅಲ್ಲದೇ, ತಮ್ಮ ಜೀವನವನ್ನು ತ್ಯಜಿಸಲು ಸಹ ಮುಂದಾಗುತ್ತಾರೆ ಎಂದು ಹೇಳಿದ್ದಾರೆ.
ಹತ್ರಸ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಪುತ್ತೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಿಥುನ್ ರೈ, ಯೋಗಿ ಆದಿತ್ಯನಾಥ್ ಅವರು ನಿಜವಾದ ಯೋಗಿಯಾಗಿದ್ದರೆ ಮಠದ ಒಳಗೆ ಕುಳಿತುಕೊಳ್ಳುವಂತೆ ಸಲಹೆ ನೀಡಿದರು. ಯೋಗಿ ಹಾಗೆ ಮಾಡಿದರೆ, ಅವನ ಪಾದ ಸ್ಪರ್ಶ ಮಾಡಲು ಪ್ರತಿ ತಿಂಗಳು ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದರು.