ಕಾಪು, ಅ. 13 (DaijiworldNews/PY): ಹೆಜಮಾಡಿ ಹಾಗೂ ಸಸಿಹಿತ್ಲು ಪ್ರದೇಶಗಳು ಸಂಧಿಸುವ ಶಾಂಭವಿ ನದಿಯಲ್ಲಿ ಅ.11ರ ಭಾನುವಾರ ದೋಣಿ ದುರಂತ ಸಂಭವಿಸಿದೆ. ದುರಂತದಲ್ಲಿ ಹೆಜಮಾಡಿ ಕೋಡಿಯ ಸುಕೇಶ್ ಜಿ ಪುತ್ರನ್ (24) ಮುಳುಗಿದ್ದು, ಅ.12ರ ಸೋಮವಾರ ಮುಂಜಾನೆ ಹೆಜಮಾಡಿ ಕೋಡಿ ಸಮುದ್ರ ತೀರದಲ್ಲಿ ಆತನ ಶವ ಪತ್ತೆಯಾಗಿದೆ.

ಸಾಂದರ್ಭಿಕ ಚಿತ್ರ
ಭಾನುವಾರ ಮುಂಜಾನೆ ರಾಜೇಶ್ ಪುತ್ರನ್, ಪಾಂಡುರಂಗ ಕೋಟ್ಯಾನ್, ನಾಗೇಶ್ ಸಾಲಿಯಾನ್, ನೀರಜ್ ಕರ್ಕೇರಾ ಹಾಗೂ ಸುಕೇಶ್ ಪುತ್ರನ್ ಅವರು ಹೆಜಮಾಡಿಯಿಂದ ಏಕನಾಥ್ ಕರ್ಕೇರಾ ಅವರ ಹಳ್ಳಿಗಾಡಿನ ದೋಣಿಯಲ್ಲಿ ತೆರಳಿದ್ದು, ಮೀನು ಹಿಡಿಯನ್ನು ಬಲೆಯನ್ನು ತೆಗೆದುಕೊಂಡು ಹೋಗಿದ್ದರು. ಮೀನುಗಾರಿಕೆಯ ಬಳಿಕ ಸಂಜೆ 6.45 ರ ಸುಮಾರಿಗೆ ಮನೆ ಹಿಂದಿರುಗುತ್ತಿದ್ದಾಗ ಮುಲ್ಕಿ ನದಿ ಸಮೀಪ ಬೃಹತ್ ಅಲೆಯೊಂದು ಅಪ್ಪಳಿಸಿ ದೋಣಿ ಮುಳುಗಡೆಯಾಯಿತು.
ಈ ವೇಳೆ ದೋಣಿಯಲ್ಲಿದ್ದವರು ಸಮುದ್ರಕ್ಕೆ ಬಿದ್ದಿದ್ದು, ಹತ್ತಿರದ ಇತರ ದೋಣಿಗಳಲ್ಲಿದ್ದ ಜನರು ಅವರನ್ನು ರಕ್ಷಿಸಿದ್ದಾರೆ. ಆದರೆ, ಸುಕೇಶ್ ಪುತ್ರನ್ ಅವರು ನಾಪತ್ತೆಯಾಗಿದ್ದರು. ಬಳಿಕ ಸ್ಥಳೀಯ ಯುವಕರು ಸುಕೇಶ್ ಅವರನ್ನು ಹುಡುಕಾಡಲು ಪ್ರಾರಂಭಿಸಿದರು. ಆದರೆ, ಅವರು ಪತ್ತೆಯಾಗಲಿಲ್ಲ. ಸೋಮವಾರ ಮುಂಜಾನೆ 2 ಗಂಟೆ ಸುಮಾರಿಗೆ ಸುಕೇಶ್ ಅವರ ಶವ ಹೆಜಮಾಡಿ ಕೋಡಿ ಸಮುದ್ರದ ತೀರದಲ್ಲಿ ಪತ್ತೆಯಾಗಿತ್ತು.
ಮೀನುಗಾರರು ನೀರಿಗೆ ಬಿದ್ದ ಸಂದರ್ಭ ಅವರ ಬಳಿಯಿದ್ದ ಮೊಬೈಲ್ ಫೋನ್ಗಳು ಒದ್ದೆಯಾಗಿತ್ತು. ಆದರೆ, ನೀರಜ್ ಕರ್ಕೇರಾ ಅವರು ತಮ್ಮ ಮೊಬೈಲ್ ಅನ್ನು ಪ್ಲಾಸ್ಟಿಕ್ ಕವರ್ನಲ್ಲಿ ಇಟ್ಟುಕೊಂಡಿದ್ದರು. ಅಲ್ಲದೇ, ಈ ವೇಳೆ ಅವರು ಇತರರನ್ನು ಸಂಪರ್ಕಿಸಿದ್ದಾರೆ. ನಂತರ ಸ್ಥಳಕ್ಕೆ ಧಾವಿಸಿದ ಇತರ ದೋಣಿಯ ಜನರು ಹಾಗೂ ಕರಾವಳಿ ಭದ್ರತಾ ಪೊಲೀಸ್ ಸಿಬ್ಬಂದಿಗಳು ಅವರನ್ನು ಹಾಗೂ ದೋಣಿಯನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದರು.