ಉಡುಪಿ, ಅ. 13 (DaijiworldNews/HR): ಡಾ ಟಿ ಎಂ ಎ ಪೈ ಆಸ್ಪತ್ರೆಯ ಎಲ್ಲ ಹೊರರೋಗಿ ವಿಭಾಗಗಳು, ಈ ಹಿಂದಿನಂತೆ ಸಾರ್ವಜನಿಕರ ಸೇವೆಗೆ ಅ.15 ರಿಂದ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಲಭ್ಯವಾಗಲಿದೆ.

ಆಸ್ಪತ್ರೆಯು ಕೋವಿಡ್ -19 ಆಸ್ಪತ್ರೆಯಾಗಿ ಮುಂದುವರಿದಿದ್ದರೂ ಕೂಡ ಹೊರರೋಗಿಗಳ ಕಟ್ಟಡ ಒಳರೋಗಿ ವಿಭಾಗದಿಂದ ಪ್ರತ್ಯೇಕವಾಗಿದೆ. ಕೋವಿಡ್ -19 ಕ್ಕೆ ಸಂಬಂಧಿಸಿದ ಎಲ್ಲಾ ಮುನ್ನೆಚ್ಚರಿಕೆಗಳನ್ನು - ಮಾಸ್ಕ್, ದೈಹಿಕ ಅಂತರ, ನೈರ್ಮಲ್ಯೀಕರಣ ಮತ್ತು ಒಪಿಡಿ ಪ್ರದೇಶಗಳಲ್ಲಿ ಜನಸಂದಣಿಯನ್ನು ತಪ್ಪಿಸುವುದು ಸೇರಿದಂತೆ - ತೆಗೆದುಕೊಳ್ಳಲಾಗುವುದು. ಅಗತ್ಯವಿರುವವರು 7259032864 ಗೆ ಕರೆ ಮಾಡಿ ಪೂರ್ವ ಅಪಾಯಿಂಟ್ಮೆಂಟ್ ನೊಂದಿಗೆ ಈ ಸೌಲಭ್ಯವನ್ನು ಪಡೆಯಬಹುದು.
ವಯಸ್ಸಾದವರು, ಮಕ್ಕಳು ಮತ್ತು ಅವಲಂಬಿತ ರೋಗಿಗಳ ಸಂದರ್ಭದಲ್ಲಿ ಮಾತ್ರ ಇನ್ನೊಬ್ಬ ವ್ಯಕ್ತಿಯನ್ನು ಒಪಿಡಿ ಪ್ರದೇಶವನ್ನು ರೋಗಿಯೊಂದಿಗೆ ಪ್ರವೇಶಿಸಲು ಅನುಮತಿಸಲಾಗುತ್ತದೆ. ಆಸ್ಪತ್ರೆಗೆ ಪ್ರವೇಶಿಸುವ ಪ್ರತಿಯೊಬ್ಬರಿಗೂ ಮಾಸ್ಕ್ ಅವಶ್ಯಕವಿರುತ್ತದೆ.