ಉಡುಪಿ, ಅ. 13 (DaijiworldNews/PY): ಉಡುಪಿಯ ಜನರ ಬಹುಕಾಲದ ಬೇಡಿಕೆ ಅಂಬಾಗಿಲು-ಪೆರಂಪಳ್ಳಿ- ಮಣಿಪಾಲ ರಸ್ತೆಯನ್ನು ಚತುಷ್ಪತ ರಸ್ತೆ ಮಾಡುವ ಪ್ರಕ್ರಿಯೆ ಕೆಲಸ ಚುರುಕುಗೊಂಡಿದೆ. ಲೋಕೊಪಯೋಗಿ ಇಲಾಖೆ ಹೊರಡಿಸಿದ ಅಧಿಸೂಚನೆಯ ಮೇರೆಗೆ 7.32 ಎಕ್ರೆ ಭೂಮಿ ಟಿಡಿಆರ್ ಮೂಲಕ ಭೂಸ್ವಾಧೀನ ಪ್ರಕ್ರಿಯೆ ಈಗ ಆರಂಭಗೊಂಡಿದೆ. ಖಾಸಗಿ ಭೂಸ್ವಾಧೀನಕ್ಕೆ ಗರಿಷ್ಠ 90% ಮಂದಿ ಟಿಡಿಆರ್ಗೆ ಒಪ್ಪಿಗೆ ಸೂಚಿಸಿದ್ದು, ಎರಡು ತಿಂಗಳೋಳಗೆ ಭೂಸ್ವಾಧೀನ ಪಕ್ರಿಯೆ ಪೂರ್ಣವಾಗುತ್ತದೆ. ತದ ನಂತರ ಕಾಮಗಾರಿ ಪ್ರಕ್ರಿಯೆಯು ಶ್ರೀಘದಲ್ಲೇ ಆರಂಭವಾಗಲಿದೆ.














ಕುಂದಾಪುರ, ಸಂತೆಕಟ್ಟೆ ಭಾಗದಿಂದ ಮಣಿಪಾಲಕ್ಕೆ ಬರುವವರಿಗೆ ಇನ್ನು ಮುಂದೆ ಮಣಿಪಾಲಕ್ಕೆ ಬರಲು ಸುಲಭ ಸಾಧ್ಯವಾಗಲಿದೆ. ಈ ಹಿಂದೆ ಕುಂದಾಪುರದಿಂದ ಮಣಿಪಾಲಕ್ಕೆ ಬರಬೇಕಾದರೆ, ಹೆಚ್ಚುವರಿ 3.5 ಕಿ ಮಿ ಸುತ್ತಿ ತಲುಪಬೇಕಿತ್ತು. ಅಂಬಾಗಿಲಿನಿಂದ ಮಣಿಪಾಲಕ್ಕೆ ಈ ಹೊಸ ಮಾರ್ಗದಲ್ಲಿ ಕೇವಲ 5.5 ಕಿಲೋ ಮೀಟರ್ನಲ್ಲಿ ಕ್ರಮಿಸಬಹುದಾಗಿದೆ. ಈ ರಸ್ತೆಯ ಅಗಲೀಕರಣವು ದಶಕಗಳ ಬೇಡಿಕೆ. ಟಿಡಿಆರ್ (ಟ್ರಾನ್ಸ್ಫರ್ ಆಫ್ ಡೆವಲ್ಮೆಂಟ್ ರೈಟ್ಸ್) ಮಾದರಿಯಲ್ಲಿ ಈಗಾಗಲೇ ಭೂ ಸ್ವಾದೀನಕ್ಕೆ ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಚಾಲನೆ ನೀಡಲಾಗಿದೆ.
ಟ್ರಾನ್ಸ್ಫರ್ ಆಫ್ ಡೆವಲ್ಮೆಂಟ್ ರೈಟ್ಸ್ ಮಾದರಿಯಲ್ಲಿ ಉಡುಪಿಯಲ್ಲಿಯೇ ಮೊದಲ ಬಾರಿಗೆ ಈ ರಸ್ತೆಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಈ ರಸ್ತೆ ಅಗಲೀಕರಣ ಪ್ರಕ್ರಿಯೆಯಿಂದಾಗಿ ಭೂಮಿ ಕಳೆದುಕೊಳ್ಳುವ ಜನರೊಂದಿಗೆ ಶಾಸಕರು ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದ್ದು 90 ಶೇಕಡಾ ಜನರು ಭೂಮಿ ಬಿಟ್ಟು ಕೊಡಲು ಒಪ್ಪಿದ್ದಾರೆ. ಇದರಿಂದ ಭೂಮಿ ಕಳೆದುಕೊಳ್ಳುವ ಸಂತ್ರಸ್ತರಿಗೆ ಅವರು ಕಳೆದುಕೊಳ್ಳುವ ಭೂಮಿಯ ದುಪ್ಪಟ್ಟು ಮೌಲ್ಯದ ಹಕ್ಕುಗಳನ್ನು ಸಂತ್ರಸ್ತರಿಗೆ ನೀಡಲಾಗುವುದು ಇದನ್ನು ಅವರು ತಮ್ಮದೇ ಸ್ವತಃ ಬಳಕೆಗೆ ಅಥವಾ ಆ ಹಕ್ಕುಗಳನ್ನು ಮಾರಾಟ ಮಾಡಲು ಕೂಡಾ ಅವಕಾಶ ಇದೆ. ರಸ್ತೆ ಅಗಲೀಕರಣದ ಭೂಸ್ವಾಧೀನಕ್ಕಾಗಿ ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ ಸುಮಾರು 15 ಕೋಟಿ ರೂಪಾಯಿ ಬಿಡುಗಡೆ ಆಗಿದ್ದು, ಟೆಂಡರ್ ಪ್ರಕ್ರಿಯೆ ಕೂಡಾ ಪೂರ್ಣಗೊಂಡಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಅಂಬಾಗಿಲು - ಮಣಿಪಾಲ ರಸ್ತೆ ವಿಸ್ತರೀಕರಣದಿಂದಾಗಿ ಕುಂದಾಪುರ, ಬ್ರಹ್ಮಾವರ, ಸಂತೆಕಟ್ಟೆ, ಭಾಗದಿಂದ ದಿನಂಪ್ರತಿ ಮಣಿಪಾಲದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ, ಆಸ್ಪತ್ರೆಗಾಗಿ ಬರುವ ಕುಟುಂಬಕ್ಕೆ ತುಂಬಾ ಸಹಕಾರಿಯಾಗಲಿದೆ. ಈಗ ಸದ್ಯ ರಸ್ತೆಯ ಅಗಲ 10 ಮೀಟರ್ ಇದ್ದು ಇನ್ನು 20 ಮೀ ಆಗಲಿದೆ. ರಸ್ತೆಯ ಮಧ್ಯ ಭಾಗದಿಂದ ಎರಡೂ ಬದಿಯಲ್ಲಿ 10 ಮೀಟರ್ನಷ್ಟು ಭೂಸ್ವಾಧೀನ ಮಾಡಿಕೊಳ್ಳಲಾಗುವುದು. ಸುಮಾರು 7.32 ಎಕ್ರೆಯಷ್ಟು ಭೂಮಿಯನ್ನು ಈ ಕಾಮಗಾರಿಗಾಗಿ ಸ್ವಾಧೀನ ಪಡಿಸಿಕೊಳ್ಳುವ ಅಗತ್ಯತೆ ಇದೆ. ಸ್ವಲ್ಪ ಜಾಗ ಕಳೆದು ಕೊಂಡವರಿಗೆ ನೇರವಾಗಿ ಪರಿಹಾರ ಧನ ಮತ್ತು ತಮ್ಮ ದೊಡ್ಡ ಮೊತ್ತದ ಭೂಮಿಯನ್ನು ಕಳೆದು ಕೊಂಡವರಿಗೆ ಟಿಡಿಆರ್ ಪ್ರಮಾಣ ಪತ್ರವನ್ನು ಕೊಡಲಾಗುವುದು.
ಏನಿದು ಟಿಡಿಆರ್? (ಟ್ರಾನ್ಸ್ಫರ್ ಆಫ್ ಡೆವಲ್ಮೆಂಟ್ ರೈಟ್ಸ್):
ಈ ಟಿಡಿಆರ್ ಪ್ರಮಾಣ ಪತ್ರವನ್ನು ಮೊದಲು ಅನುಷ್ಠಾನ ಮಾಡಿದ್ದು ಮುಂಬಯಿ, ಮಹಾರಾಷ್ಟ್ರಗಳಂತಹ ರಾಜ್ಯದಲ್ಲಿ. ಸದ್ಯ ಟಿಡಿಆರ್ ಬಳಕೆ ಹೆಚ್ಚು ಚಾಲ್ತಿಯಲ್ಲಿದೆ. 2016 ರಲ್ಲಿ ಬೆಂಗಳೂರಿನಲ್ಲಿ ಚಾಲ್ತಿಗೆ ಬಂದಿದ್ದು, ಉಡುಪಿಯಲ್ಲಿ ಇದೀಗಷ್ಟೆ ಪರಿಚಯವಾಗುತ್ತಿದೆ. ಭೂ ಮಾಲಿಕನ ನಂತರ ಆತನ ಮಕ್ಕಳಿಗೂ ಇದು ವರ್ಗಾವಣೆ ಮಾಡಲಾಗುತ್ತದೆ. ಈ ಪತ್ರಕ್ಕೆ ಯಾವುದೇ ವ್ಯಾಲಿಡಿಟಿ ಇರುವುದಿಲ್ಲ. ನಿಯಮ ಉಲ್ಲಂಘಿ ಕಟ್ಟಿದ ಹೆಚ್ಚುವರಿ ಕಟ್ಟಡ ಮಹಡಿಯನ್ನು ಸಕ್ರಮ ಮಾಡಿಕೊಳ್ಳಲು ಈ ಟಿಡಿಆರ್ ಪತ್ರದಿಂದ ಸಾಧ್ಯವಾಗುತ್ತದೆ. ಆದರೆ ಈ ಪತ್ರ ನಗರದಿಂದ ಗ್ರಾಮೀಣ ಭಾಗದ ಜಾಗಕ್ಕೆ ಅನ್ವಯ ಆಗುತ್ತದೆ. ಸಿಆರ್ಝಡ್, ಸೂಕ್ಷ್ಮ ಪ್ರದೇಶಗಳಿಗೆ ಇದು ಅನ್ವಯವಾಗುವುದಿಲ್ಲ. ಸರಕಾರಕ್ಕೂ ಕೂಡ ಪರಿಹಾರ ಹಣ ನೀಡುವ ಸಮಸ್ಯೆ ತಪ್ಪುತ್ತದೆ. ಈ ಪತ್ರದಿಂದ ಸಂತ್ರಸ್ಥರು ಕಳೆದು ಕೊಂಡ ಭೂಮಿಗಿಂತ ಎರಡು ಪಟ್ಟು ಹೆಚ್ಚು ಅಭಿವೃದ್ದಿಗೆ ಅವಕಾಶ ಇದೆ. ಅಲ್ಲದೆ ಟಿಡಿ ಆರ್ ರೈಟ್ಸ್ ಅನ್ನು ಡೆವಲಪರ್ಸ್ಗೆ ಕೂಡ ಮಾರಬಹುದಾಗಿದೆ.