ವಿಟ್ಲ, ಅ. 13 (DaijiworldNews/SM): ಇಲ್ಲಿನ ಇತಿಹಾಸ ಪ್ರಸಿದ್ದ ಕೇಪು ಉಳ್ಳಾಲ್ತಿ ದೇವಸ್ಥಾನಕ್ಕೆ ನುಗ್ಗಿದ ಖದೀಮರ ತಂಡ ದೇವಸ್ಥಾನದಲ್ಲಿದ್ದ ಬೆಳ್ಳಿಯ ವಸ್ತುಗಳು ಹಾಗೂ ಕಾಣಿಕೆ ಡಬ್ಬದಲ್ಲಿದ್ದ ಹಣವನ್ನು ಎಗರಿಸಿದ ಘಟನೆ ಬೆಳಕಿಗೆ ಬಂದಿದೆ.

ಕಾರ್ಣಿಕ ದೇವಸ್ಥಾನದಲ್ಲಿ ಕಳವು ಕೃತ್ಯ ಮೊದಲ ಬಾರಿಗೆ ನಡೆದಿದೆ ಎನ್ನಲಾಗಿದ್ದು, ಗರ್ಭಗುಡಿಗೆ ಪ್ರವೇಶಿಸಿದ ಕಳ್ಳರು ಅರ್ಧ ಕೆಜಿಗೂ ಅಧಿಕ ತೂಕದ ಬೆಳ್ಳಿ ವಸ್ತುಗಳು ಹಾಗೂ ಕಾಣಿಕೆ ಹಣ ಕಳವುಗೈದಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಜಂಬು ಜಾತ್ರೆಗೆ ಹೆಸರುವಾಸಿಯಾದ ಕಾರ್ಣಿಕದ ದೇವಸ್ಥಾನ ಕೇಪು ಉಳ್ಳಾಲ್ತಿ ದೇವಸ್ಥಾನವಾಗಿದೆ. ವಿಟ್ಲ ಅರಮನೆಯ ಆಡಳಿತಕ್ಕೊಳಪಟ್ಟ ದೇವಸ್ಥಾನಗಳಲ್ಲಿ ಇದು ಕೂಡ ಒಂದಾಗಿದೆ.