ಉಡುಪಿ, ಅ. 14 (DaijiworldNews/MB) : ದಲಿತರು, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು), ಕರ್ನಾಟಕ ಪ್ರಾಂತ ರೈತ ಸಂಘ (ಎಐಕೆಎಸ್), ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ (ಎಐಎಡಬ್ಯ್ಲೂಯು), ಕೆಪಿಆರ್ಎಸ್ ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು ಮಂಗಳವಾರ ಅಕ್ಟೋಬರ್ 13 ರಂದು ಉಡುಪಿಯಲ್ಲಿ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ನಡೆಸಿ ಕೇಂದ್ರ, ರಾಜ್ಯ ಸರಕಾರವನ್ನು ಒತ್ತಾಯಿಸಲಾಯಿತು.




ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ, ಸಿಐಟಿಯು ನ ಜಿಲ್ಲಾಧ್ಯಕ್ಷರಾದ ಕೆ ಶಂಕರ್ ಮಾತನಾಡಿ, 'ದಲಿತರ ಹಾಗೂ ಇತರ ದಮನಿತ ಸಮೂಹಗಳ ಮೇಲಿನ ವಿಶೇಷವಾಗಿ, ದಲಿತ ಮಹಿಳೆಯರ ಮೇಲೆ ಬಿಜೆಪಿ ಆಡಳಿತ ಅಡಿಯಲ್ಲಿ ದೌರ್ಜನ್ಯಗಳು ಹೆಚ್ಚುತ್ತಲೇ ಒಂದು ಗಂಭೀರವಾದ ಪರಿಸ್ಥಿತಿ ದೇಶವನ್ನು ಆವರಿಸುತ್ತಿದೆ. ಉತ್ತರ ಪ್ರದೇಶದಲ್ಲಂತೂ ಆರೆಸ್ಸೆಸ್ ನೇತೃತ್ವದ ಯೋಗಿ ಸರ್ಕಾರ ಅಪರಾಧಿಕರಣ ಆಡಳಿತ ವನ್ನು ಗಟ್ಟಿ ಗೊಳಿಸುತ್ತಾ, ರಾಜ್ಯವನ್ನು ಮೇಲ್ಜಾತಿ ಭೂಮಾಲಕ ಶಕ್ತಿಗಳ ಪ್ರಯೋಗಾಲಯವನ್ನು ಪರಿವರ್ತಿಸುತ್ತದೆ ಎಂದರು.
ಭಾರತದ "ಸಮಾಜದ ತಳವರ್ಗಗಳ ಸಮೂಹಗಳು ಮೇಲಿನ ದೌರ್ಜನ್ಯಗಳು, ಸಾಮೂಹಿಕ ಅತ್ಯಾಚಾರ ಗಳು, ಮತ್ತು ಬರ್ಬರ ಹತ್ಯೆ ಗಳು ಆಘಾತಕಾರಿಯಾಗಿ ಹೆಚ್ಚಾಗುತ್ತಿದೆ, ಈ ಬೆಳವಣಿಗೆ ಸಮಾಜದ ದಲಿತ ದಮನಿತರನ್ನು ಬಿಕ್ಕಟ್ಟು ಗ್ರಸ್ತ ಅಂಚಿಗೆ ತಳ್ಳುವ ನವ ಉದಾರೀಕರಣದ ಸಂಚಿನ ಭಾಗವಾಗಿ. ದೇಶದಲ್ಲಿ ವಿಶೇಷವಾಗಿ, ಬಿಜೆಪಿ ಆಡಳಿತ ವಿರುವ ರಾಜ್ಯಗಳಲ್ಲಿ ಭೂ ಸುಧಾರಣೆಗಳ ಬುಡಮೇಲು ಕಾರಣ ಸಾರ್ವಜನಿಕ ರಂಗದ ವ್ಯಾಪಕ ಖಾಸಗೀಕರಣ, ಉದ್ಯೋಗ ನಷ್ಟದಿಂದ ಬದುಕಿನಲ್ಲಿ ಭರವಸೆ ಕಳೆದುಕೊಳ್ಳುತ್ತಿರುವವರು ಅನಿವಾರ್ಯವಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ ಇದರಿಂದ, ದಲಿತ ದಮನಿತ ವಿಭಾಗಗಳಲ್ಲಿ ಮೂಡಿಬರುತ್ತಿರುವ ಎಚ್ಚರ ಹಾಗೂ ಪ್ರತಿಭಟನಾ ಧ್ವನಿಯ ವಿರುದ್ಧವಾದ ಮನುವಾದಿ ಹಿಂದುತ್ವ ಶಕ್ತಿಗಳ ಬೆಂಬಲದೊಂದಿಗೆ ಗ್ರಾಮೀಣ ಶ್ರೀಮಂತರು ಮತ್ತು ಭೂ ಮಾಲೀಕರು ತಮ್ಮ ಕೂಟವನ ಬಲಪಡಿಸುತ್ತಾ ಕಾರ್ಪೊರೇಟ್ಗಳ ಹಿತಸಾಧನೆ ಮಾಡುತ್ತಿವೆ. ನವ ಉದಾರೀಕೃತ ಹಿಂದುತ್ವ ಆಡಳಿತದಲ್ಲಿ ದುಡಿಯ ಜನರ ಶೋಷಣೆ ಮತ್ತು ಯಾವುದೇ ಪ್ರತಿಭಟನೆಯ ದಮನ ಭಾರತದಲ್ಲಿ ಜಾತಿ/ಲಿಂಗ ಆಧಾರಿತ ದಮನವಾಗಿದೆ ಪ್ರಕಟಗೊಳ್ಳುವುದು ಎಂದು ಹೇಳಿದರು.
ಆಳುವ ವರ್ಗ ಗಳಿಂದ ದಲಿತರ ಸಂವಿಧಾನಾತ್ಮಕ ಹಕ್ಕುಗಳ ನಿರಂತರ ಉಲ್ಲಂಘನೆ ಯಾಗುತ್ತಿದೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989 ಯನ್ನು ಹಿಂದಿನ ಸರ್ಕಾರಗಳು ಸಮರ್ಪಕವಾಗಿ ಜಾರಿ ಮಾಡಲಿಲ್ಲ ಆದರೆ ಬಿಜೆಪಿ ಸರ್ಕಾರ ಕಾಯ್ದೆಯನ್ನು ದುರ್ಬಲಗೊಳಿಸುತ್ತದೆ ಮಾತ್ರವಲ್ಲ ದಲಿತರ ದೌರ್ಜನ್ಯ ಎಸಗುತ್ತಿರುವ ಅಪರಾಧಿಗಳಿಗೆ ಕುಮ್ಮಕ್ಕು ನೀಡುತ್ತಿದೆ ಮತ್ತು ಆ ಮೂಲಕ ದಲಿತರ ಮೇಲಿನ ದೌರ್ಜನ್ಯಗಳನ್ನು ಹೆಚ್ಚಿಸುತ್ತದೆ, ಎಂದು ಶಂಕರ್ ಆರೋಪಿಸಿದರು.
ಆದ್ದರಿಂದ ನಮ್ಮೆಲ್ಲಾ ಸಂಘಟನೆಗಳು ರಾಜ್ಯದಾದ್ಯಂತ ಜಂಟಿ ಪ್ರತಿಭಟನೆಗಳನ್ನು 16.10.2020 ರಂದು ಸಂಘಟಿಸಲು ನಿರ್ಧರಿಸಿ, ಅದನ್ನು ಯಶಸ್ವಿಗೊಳಿಸಲು ಎಲ್ಲಾ ಘಟಕಗಳಿಗೆ ಮತ್ತು ನಾಗರಿಕರಿಗೆ ಕರೆ ನೀಡಲಾಗುತ್ತದೆ ಎಂದರು.