ಮಂಗಳೂರು, ಅ. 14 (DaijiworldNews/MB) : ಕಾವೂರಿನಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ನಡೆಸದಂತೆ ಹಲವು ಬಾರಿ ಮಂಗಳೂರು ಮಹಾನಗರ ಪಾಲಿಕೆಯು ಬೀದಿ ಬದಿ ವ್ಯಾಪಾರಸ್ಥರಿಗೆ ಸೂಚಿಸಿದ್ದು ವ್ಯಾಪಾರಸ್ಥರು ಬೀದಿ ಬದಿಯಲ್ಲಿ ವ್ಯಾಪಾರ ನಡೆಸುತ್ತಲ್ಲೇ ಇದ್ದಾರೆ. ಈ ಹಿನ್ನೆಲೆ ಇಂದು ಬೆಳ್ಳಬೆಳಗ್ಗೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ್ ಅವರು ಕಾವೂರು ಮಾರುಕಟ್ಟೆಗೆ ಬೆಳ್ಳಂಬೆಳಗೆ ದಾಳಿ ನಡೆಸಿದ್ದಾರೆ.





ಕಾವೂರಿನಲ್ಲಿ ನೂತನ ಮಾರುಕಟ್ಟೆಗೆ ಮಾರಾಟಗಾರರು ತೆರಳುವಂತೆ ಸೂಚನೆ ನೀಡಿದ್ದ ಮಹಾನಗರ ಪಾಲಿಕೆಯು ಈ ಹಿಂದೆ ಕಾವೂರಿನಲ್ಲಿ ಬೀದಿ ಬದಿ ವ್ಯಾಪಾರಸ್ಥರನ್ನು ಸ್ಥಳದಿಂದ ತೆರವುಗೊಳಿಸಿದ್ದು ತಂತಿ ಬೇಲಿ ಅಳವಡಿಸಿತ್ತು. ಆದರೆ ಪಾಲಿಕೆಯ ಸೂಚನೆಗೆ ಕ್ಯಾರೇ ಅನ್ನದ ಬೀದಿ ಬದಿ ವ್ಯಾಪಾರಸ್ಥರು ಆ ತಂತಿ ಬೇಲಿಯನ್ನು ಕಿತ್ತು ಮಾರಾಟ ಆರಂಭಿಸಿದ್ದರು.
ಈ ಹಿನ್ನೆಲೆ ಇಂದು ಬೆಳ್ಳಂಬೆಳಗೆ ಮನಪಾ ಮೇಯರ್ ದಿವಾಕರ್ ಪಾಂಡೇಶ್ವರ್ ಅವರು ಕಾವೂರು ಮಾರುಕಟ್ಟೆಗೆ ದಾಳಿ ನಡೆಸಿದ್ದು ಈ ಸಂದರ್ಭದಲ್ಲಿ ವ್ಯಾಪಾರಸ್ಥರು ಹಾಗೂ ಮನಪಾ ಮೇಯರ್ ದಿವಾಕರ್ ಪಾಂಡೇಶ್ವರ್ ಅವರ ಮಧ್ಯೆ ಮಾತಿನ ಚಕಮಕಿ ನಡೆದಿದೆ.