ಮಂಗಳೂರು, ಅ. 14 (DaijiworldNews/MB) : ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಕಸಾಯಿ ಖಾನೆಯಲ್ಲಿ ಮಟನ್ ಸ್ಟಾಲ್ಗಳಲ್ಲಿ ಇತರೆ ಮಾಂಸದೊಂದಿಗೆ ದನದ ಮಾಂಸ ಬೆರಕೆ ಮಾಡುವ ಆರೋಪವಿರುವ ಹಿನ್ನೆಲೆಯಲ್ಲಿ ಬುಧವಾರ ಮುಂಜಾನೆ ಮಂಗಳೂರು ನಗರ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ್ ಸೇರಿದಂತೆ ಮನಪಾ ಅಧಿಕಾರಿಗಳು ಕಸಾಯಿಖಾನೆ, ಮಾರಾಟ ಮಳಿಗೆಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.



ದಾಳಿ ವೇಳೆ ಕಸಾಯಿ ಖಾನೆ ಮತ್ತು ಮಾರಾಟ ಮಳಿಗೆಗಳ ಪರವಾನಿಗೆ ಮತ್ತು ಬಿಲ್ಗಳನ್ನು ಮೇಯರ್ ಪರಿಶೀಲನೆ ನಡೆಸಿದ್ದು ಅಕ್ರಮ ಮಾರಾಟ ಮತ್ತು ವಧೆಗಳ ಬಗ್ಗೆ ನಿಗಾ ಇರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಾಂಸ ಮಳಿಗೆಗಳಲ್ಲಿ ಮಾರಾಟವಾಗುವ ಮಾಂಸದಲ್ಲಿ ಕಡ್ಡಾಯ ಸೀಲ್ ಮತ್ತು ಬಿಲ್ ಇರುವಂತೆ ಸೂಚನೆ ನೀಡಿರುವ ಮೇಯರ್ ದಿವಾಕರ್ ಅವರು, ಅಕ್ರಮ ಮಾರಾಟ ನಡೆಸದಂತೆ ಮಾಂಸ ಮಾರಾಟಗಾರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.