ಬೆಳ್ತಂಗಡಿ, ಅ. 14 (DaijiworldNews/PY): ಜಿ.ಪಂ, ದ.ಕ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಸಮುದಾಯ(ರಿ) ತುಮಕೂರು ಸಹಯೋಗದೊಂದಿಗೆ ಜಲಜೀವನ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಹಮ್ಮಿಕೊಂಡ ಸ್ವಸಹಾಯ ಸಂಘಗಳ ಜಾಥಾ ಮತ್ತು ವಿಶೇಷ ಗ್ರಾಮಸಭೆಯು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮ ಪಂಚಾಯತಿಯಲ್ಲಿ ಅ.13ರ ಮಂಗಳವಾರದಂದು ಜರುಗಿತು.



ಕಾರ್ಯಕ್ರಮದಲ್ಲಿ ಐಇಸಿ ಮತ್ತು ಹೆಚ್.ಆರ್.ಡಿ ಚಟುವಟಿಕಗಳ ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಯಿತು. ಬಳಿಕ ಗ್ರಾಮಸ್ಥರು ಜೆಜೆಎಮ್ ಮತ್ತು ಸ್ವಚ್ಯ ಭಾರತ್ ಸದಸ್ಯರೊಂದಿಗೆ ಕಾರ್ಯಕ್ರಮದ ಮಾಹಿತಿ ಕುರಿತು ಆರೋಗ್ಯಕರ ಚರ್ಚೆ ನಡೆಸಿದರು.
ಈ ಸಂದರ್ಭ ವೇದಿಕೆಯಲ್ಲಿ ಲಾಯಿಲ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟಕೃಷ್ಣ ರಾಜು, ತಾ.ಪಂ.ಸದಸ್ಯ ಸುಧಾಕರ.ಬಿ.ಎಲ್, ಪಂಚಾಯತ್ ಕಾರ್ಯದರ್ಶಿ ರೇಷ್ಮಾ ಗಂಜಿಗಟ್ಟಿ, ಗ್ರಾಮಸಭೆಯ ಮಾರ್ಗದರ್ಶಿ ಡಾ.ರವಿಕುಮಾರ್ ಎಂ, ಸಮುದಾಯ ಸಂಸ್ಥೆಯ ಸದಸ್ಯರು, ಸ್ವಚ್ಛ ಭಾರತ ಮಿಷನ್ ಸದಸ್ಯರು ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾಮಸ್ಥರು, ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು.