ಸುಳ್ಯ, ಅ. 14 (DaijiworldNews/PY): ಕಲ್ಲುಗುಂಡಿ ಸಂಪತ್ ಕುಮಾರ್ ಹತ್ಯೆಗೆ ಸಂಬಂಧಿಸಿದಂತೆ, ಕೊಲೆಗಾರರಿಗೆ ಬಂದೂಕು ಸರಬರಾಜು ಮಾಡಿದ ಇಬ್ಬರು ವ್ಯಕ್ತಿಗಳನ್ನು ಹಾಗೂ ಅವರ ಕಾರನ್ನು ಬಾಡಿಗೆಗೆ ಪಡೆದ ಒಬ್ಬ ವ್ಯಕ್ತಿಯನ್ನು ಅಕ್ಟೋಬರ್ 13ರ ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಐದು ಪ್ರಮುಖ ಆರೋಪಿಗಳನ್ನು ಅ.11ರ ಭಾನುವಾರದಂದು ಬಂಧಿಸಲಾಗಿದೆ. ಸದ್ಯ ಬಂಧಿತ ಆರೋಪಿಗಳ ಸಂಖ್ಯೆ ಎಂಟಕ್ಕೆ ಏರಿದೆ. ಈ ಪೈಕಿ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಹತ್ಯೆಗಾರರ ತಂಡಕ್ಕೆ ಬಂದೂಕು ಒದಗಿಸಿದ್ದಾನೆ ಎಂದು ವರದಿಯಾಗಿದ್ದು, ಮಡಿಕೇರಿಯಿಂದ ಬಂದ ರವೀಂದ್ರ, ಡಿಂಪಲ್ ಹಾಗೂ ಕಾರು ಒದಗಿಸಿದ ರಾಜೇಶ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇವರಿಗೆ ಅ.21ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.