ಮಂಗಳೂರು, ಅ. 15 (DaijiworldNews/MB) : ಮಾರ್ಚ್ನಲ್ಲಿ ಕೊರೊನಾ ಕಾರಣದಿಂದಾಗಿ ಇದ್ದಕ್ಕಿದ್ದಂತೆ ಸ್ಥಗಿತಗೊಳಿಸಲಾಗಿದ್ದ ಸಿನೆಮಾ ಪ್ರದರ್ಶನ ಈಗ ಮತ್ತೆ ಆರಂಭವಾಗಲಿದೆ. ಭಾರತ್ ಮಾಲ್ನ ಬಿಗ್ ಸಿನೆಮಾಸ್ ಹಾಗೂ ನಗರದ ಸಿಟಿ ಸೆಂಟರ್ ಮಾಲ್ನ ಸಿನಿಪಾಲಿಸಿ ಮಲ್ಟಿಪ್ಲೆಕ್ಸ್ ಥಿಯೇಟರ್ಗಳು ಅಕ್ಟೋಬರ್ 15 ರಂದು ಮತ್ತೆ ತೆರೆಯಲಿದೆ. ಆದರೆ ಫಾರಂ ಫಿಝಾ ಮಾಲ್ನಲ್ಲಿರುವ ಪಿವಿಆರ್ ಚಿತ್ರ ಮಂದಿರ ಕೆಲವು ದಿನಗಳ ಬಳಿಕ ತೆರೆಯಲಿದೆ. ಮಣಿಪಾಲ ಐನಾಕ್ಸ್ ಚಿತ್ರ ಮಂದಿರ ಯಾವುದೇ ಅಧಿಕೃತ ಘೋಷನೆ ಮಾಡಿಲ್ಲ. ಹಾಗೆಯೇ ಮಣಿಪಾಲದ ಭಾರತ್ ಸಿನಿಮಾ ಗುರುವಾರ ಮತ್ತೆ ತೆರೆಯಲಿದೆ.

ಸಾಂದರ್ಭಿಕ ಚಿತ್ರ
ಪ್ರೇಕ್ಷಕರನ್ನು ಮತ್ತೆ ಮನರಂಜಿಸಲು ಸಿದ್ದವಾಗಿರುವ ಮಲ್ಟಿಪ್ಲೆಕ್ಸ್ಗಳು ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವತ್ತ ಗಮನ ಹರಿಸಿ ಆಸನಗಳನ್ನು ಮರುಜೋಡನೆ ಮಾಡಲಾಗಿದೆ. ಆನ್ಲೈನ್ ಬುಕ್ಕಿಂಗ್ ಆರಂಭವಾಗಿದೆ.
ನಗರ ಚಿತ್ರಮಂದಿರಗಳಾದ ಜ್ಯೋತಿ, ರಾಮಕಾಂತಿ, ರೂಪಾವಾಣಿ, ಸುಚಿತ್ರಾ, ಪ್ರಭಾತ್, ಸುರತ್ಕಲ್ನ ನಟರಾಜ್ ಥಿಯೇಟರ್, ಮೂಡಬಿದಿರೆಯ ಅಮರಶ್ರೀ, ಪುತ್ತೂರಿನ ಅರುಣಾ, ಸುಳ್ಯದ ಸಂತೋಷ್, ಬೆಳ್ತಂಗಡಿಯ ಭಾರತ್, ಉಡುಪಿ ಜಿಲ್ಲೆಯಲ್ಲಿನ ಅಲಂಕಾರ್, ಅಲಂಕರ್, ಆಶಿರ್ವಾದ್, ಪ್ಲಾನೆಟ್ ಸಿನಿಮಾ ಮಂದಿರದಲ್ಲಿ ಸಿನಿಮಾಗಳ ಪ್ರದರ್ಶನಕ್ಕೆ ಸಿದ್ದತೆ ನಡೆಸಿದ್ದಾರೆ. ಆದರೆ ಅಧಿಕೃತ ದಿನಾಂಕವನ್ನು ಘೋಷಿಸಿಲ್ಲ.
ಕೊರೊನಾ ಕಾರಣದಿಂದಾಗಿ ಮುಚ್ಚಲ್ಪಟ್ಟಿದ್ದ ಸಿನಿಮಾ ಮಂದಿರವನ್ನು ಈಗ ಮತ್ತೆ ಆರಂಭ ಮಾಡಲು ರ್ವಹಣೆ ಮತ್ತು ನವೀಕರಣಕ್ಕಾಗಿ ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ ಎಂಬುದು ಸಿಂಗಲ್ ಸ್ಕ್ರೀನ್ ಥಿಯೇಟರ್ ಮಾಲೀಕರಿಗೆ ಎದುರಾಗಿರುವ ಸಮಸ್ಯೆಯಾಗಿದೆ. ಆದ್ದರಿಂದ, ಹಲವಾರು ಸಿಂಗಲ್ ಸ್ಕ್ರೀನ್ ಥಿಯೇಟರ್ ಮಾಲೀಕರು ಸಿನಮಾ ಮಂದಿರವನ್ನು ಮತ್ತೆ ತೆರೆಯುವ ಬಗ್ಗೆ ಇನ್ನೂ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.