ಪುತ್ತೂರು, ಮೇ 20: ಹಿಂದೂ ಸಮಾಜವನ್ನು ಮತ್ತು ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಹತ್ಯೆ ಮತ್ತು ಹಲ್ಲೆ ಎರಡು ದ್ವೇಷದ ರಾಜಕಾರಣದಿಂದ ಆರಂಭಗೊಂಡಿದೆ. ಇದೊಂದು ಕಾಂಗ್ರೆಸ್ ಪ್ರಾಯೋಜಿತ ಗೂಂಡಾಗಿರಿಯಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. ಅವರು ವಿಟ್ಲ ಮಂಗಿಲಪದವು, ಕುಡ್ತಮುಗೇರು ಪರಿಸರದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುವನ್ನು ಭೇಟಿ ಮಾಡಿದ ಬಳಿಕ ಪತ್ರಕರ್ತರೊಂದಗಿಗೆ ಅವರು ಮಾತನಾಡಿದರು. ಏಳು ಶಾಸಕರು ಮೊನ್ನೆ ಗೆಲುವಿನ ಮೂಲಕ ಜನರ ಆಶಿರ್ವಾದ ಪಡೆದಿದ್ದು, ಅದನ್ನು ಸಹಿಸದ ಕಾಂಗ್ರೆಸ್ನ ಕಾರ್ಯಕರ್ತರು ವಿಜಯೋತ್ಸವಗಳಲ್ಲಿ ಹಲ್ಲೆ ಮಾಡುವುದನ್ನು ಆರಂಭಿಸಿದ್ದಾರೆ. ನಿನ್ನೆ ಸರಕಾರ ಬದಲಿ ಅದ ಕಾರಣ ಕಾರ್ಯಕರ್ತರು ನೇರವಾಗಿ ಮನೆಗಳಿಗೆ ಧಾಳಿ ಮಾಡಿ ಹಲ್ಲೆ ಮಾಡುವುದನ್ನು ಆರಂಭಿಸಿದಲ್ಲದೆ ಹಿಂದೂ ಸಮಾಜ, ದೇವ ದೇವತೆಗಳಿಗೆ ನಿಂಧನೆ ಮಾಡುವುದನ್ನು ಆರಂಭಿಸಿದ್ದಾರೆ. ಮನೆಯೊಳಗೆ ಹೊಕ್ಕಿ ಮಹಿಳೆಯರಿಗೆ ಹಲ್ಲೆ ನಡೆಸುತ್ತಿರುವುದನ್ನು ನೋಡಿದರೆ ಕಾಂಗ್ರೆಸ್ ಹತಾಶ ಭಾವನೆಯಿಂದ ಈ ಕೆಲಸ ಮಾಡುತ್ತಿದೆ ಎಂದ ಅವರು ಕೆಲವೊಂದು ಪೊಲೀಸರು ರಾಜಕಾರಣ ಮಾಡುವುದನ್ನು ಕೂಡಾ ಈ ಘಟನೆಯಲ್ಲಿ ಕಂಡಿದ್ದೇನೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತಿದ್ದೆನೆ. ಮುಂದೆ ಉಗ್ರವಾದ ಹೋರಾಟ ನಾವು ಆರಂಭಿಸುತ್ತೇವೆ. ಹಲ್ಲೆ ಮತ್ತು ಆಕ್ರಮಣವನ್ನು ನಾವು ಸಹಿಸುವುದಿಲ್ಲ. ದ್ವೇಷದ ರಾಜಕಾರಣಕ್ಕೆ ಉತ್ತರ ಕೊಡಲು ನಾವೇನು ಬಲೆ ತೊಟ್ಟಿಲ್ಲ. ಹಲ್ಲೆ ಆಕ್ರಮಣ ಮಾಡುವ ಹಿಂದೆ ಇರುವ ಸೋತ ಅಭ್ಯರ್ಥಿಗಳು ಮಾನಸಿಕವಾಗಿ ಕುಂದಿ ಇಂತಹ ಘಟನೆಗಳಿಗೆ ಪ್ರೇರಣೆ ಕೊಡುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ. ಇವತ್ತು ಹಿಂದಿನ ಬಾಗಿಲಿನಿಂದ ಅಧಿಕಾರ ಹಿಡಿದ ನೀವು ಅಭಿವೃದ್ಧಿಗಾಗಿ ಮಾಡಿದರೆ ಸರಿ ಇಲ್ಲವಾದರೆ ಉತ್ತರ ಕೊಡಲು ಬಿಜೆಪಿ ಸಿದ್ಧವಾಗಿದೆ. ನಾವು ಎಲ್ಲಾ ಶಾಸಕರ ಮೂಲಕ ದೊಡ್ಡವಾದ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.ಕಾಂಗ್ರೆಸ್ನ ಹೊಂದಾಣಿಕೆ ಚುನಾವಣೆಯಿಂದ ಹಿಂದೂಗಳ ಮೇಲೆ ಹಲ್ಲೆ- ಸಂಜೀವ ಮಠಂದೂರು ಕಾಂಗ್ರೆಸ್, ಕೆಎಫ್ಡಿಯ ಹೊಂದಾಣಿಕೆ ನಿನ್ನೆ ನಡೆದ ವಿಟ್ಲದ ಹಲ್ಲೆ ಘಟನೆಯಲ್ಲಿ ಸಾಬೀತಾಗಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು. ಕೆಎಫ್ಡಿ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಿದ ಪರಿಣಾಮ ಹಿಂದೂಗಳ ಮೇಲೆ ಹಲ್ಲೆ ಮಾಡಿದೆ. ಕಾಂಗ್ರೆಸ್ನ ಶಾಸಕರು ಹತಾಶರಾಗಿ ಬಹುಶಃ ಮುಂದಿನ ದಿನ ಹೇಗಾದರೂ ಮಾಡಿ ಲೋಕಸಭಾ ಚುನಾವಣೆಯನ್ನು ಗೆಲ್ಲಬೇಕೆಂಬ ನಿಟ್ಟಿನಲ್ಲಿ ಇವತ್ತು ಈ ರೀತಿಯ ಹಿಂದೂಗಳ ಮೇಲೆ ಹಲ್ಲೆ ಮಾಡಿ ಒಂದಷ್ಟು ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಗೆದ್ದ ತಕ್ಷಣ ದ.ಕ. ಜಿಲ್ಲೆಯಲ್ಲಿ ಮತ್ತಷ್ಟು ಕೋಮು ಗಲಭೆ ಆಗುತ್ತದೆ ಎಂಬ ಹುನ್ನಾರ ಕಾಂಗ್ರೆಸ್ ಮಾಡುತ್ತಿದೆ. ಅದಕ್ಕೆ ಕೆಎಫ್ಡಿಯಂತಹ ಮತಾಂದ ಸಂಘಟನೆ ಬೆಂಬಲವಾಗಿ ನಿಂತು ಈ ಕೆಲಸ ಮಾಡುತ್ತಿದೆ.
ಘಟನೆಯಲ್ಲಿ ಪೊಲೀಸರು ಮಾನಸಿಕವಾಗಿ ಕಾಂಗ್ರೆಸ್ ಮತ್ತು ಕೆಎಫ್ಡಿಯ ಪರವಾಗಿ ನಿಂತಿರುವುದು ಖಂಡನೀಯ. ರಕ್ಷಣೆ ಮಾಡಬೇಕಾದ ಪೊಲೀಸರೂ ಈ ಮಟ್ಟಕ್ಕೆ ಇಳಿಯಬಾರದು ಎಂದು ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ರಾಮ್ದಾಸ್ ಹಾರಾಡಿ, ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.