ಕಾಸರಗೋಡು,ಅ.15 (DaijiworldNews/HR): ಸ್ಕೂಟರ್ ಸ್ಕಿಡ್ ಆದ ಪರಿಣಾಮ ಮದ್ರಸ ಅಧ್ಯಾಪಕರೋರ್ವರು ಮೃತಪಟ್ಟ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯ ಕುಂಬ್ಡಾಜೆಯಲ್ಲಿ ನಡೆದಿದೆ.

ಕುಂಬ್ಡಾಜೆ ಮವ್ವಾರಿನ ಮುಹಮ್ಮದ್ ಅಲಿ (44) ಮೃತಪಟ್ಟವರು.
ಶನಿವಾರ ಮಧ್ಯಾಹ್ನ ಬದಿಯಡ್ಕ ಪೇಟೆಯಿಂದ ಸಾಮಾಗ್ರಿ ಖರೀದಿಸಿ ಸ್ಕೂಟರ್ ನಲ್ಲಿ ಮನೆಗೆ ಮರಳುತ್ತಿದ್ದಾಗ ದನವೊಂದು ರಸ್ತೆಗೆ ಅಡ್ದವಾಗಿ ಬಂದ ಪರಿಣಾಮ ಬೈಕ್ ಮಗುಚಿ ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟಿದ್ದಾರೆ.