ಬಳ್ಳಾರಿ ಮೇ 20: ಸರ್ಕಾರ ರಚಿಸುವಲ್ಲಿ ನಾವು ಸೋತಿರಬಹುದು, ಆದರೆ ಈ ಹಿಂದೆ 122 ಸ್ಥಾನ ಪಡೆದುಕೊಂಡು ಅಧಿಕಾರದಲ್ಲಿದ್ದ ಕಾಂಗ್ರೆಸ್ ಎಷ್ಟು ಸ್ಥಾನ ಪಡೆದುಕೊಂಡಿದ್ದಾರೆ ಅನ್ನುವುದನ್ನು ಅಲೋಚಿಸಬೇಕಾಗಿದೆ, 40 ಸ್ಥಾನವಿದ್ದ ಜೆಡಿಎಸ್ ಈ ಬಾರಿ ಎಷ್ಟು ಸ್ಥಾನ ಗೆದ್ದಿವೆ ಎನ್ನುವುದನ್ನು ಮನನ ಮಾಡಿಕೊಳ್ಳಬೇಕಾಗಿದೆ ಎಂದು ಶ್ರೀರಾಮುಲು ಹೇಳಿದ್ದಾರೆ. ಬಳ್ಳಾರಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಮಂತ್ರಿಗಿರಿಗಾಗಿ ಈಗಾಗಲೇ ಒಳಜಗಳ ಪ್ರಾರಂಭವಾಗಿದೆ ಎಂದರು.

ಈಗಾಗಲೇ ಕಾಂಗ್ರೆಸ್ ಭ್ರಷ್ಟಾಚಾರ ನಡೆಸುವ ಸಲುವಾಗಿ ಲೋಕಾಯುಕ್ತ ಸಂಸ್ಥೆಯ ಹಲ್ಲು ಮುರಿದಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಯಾಗಲಿ ಬಳಿಕ ನಾವು ಪ್ರಬಲ ಪ್ರತಿಪಕ್ಷವಾಗಿ ಅವರ ಅಕ್ರಮಗಳನ್ನು ಎತ್ತಿ ಹಿಡಿಯುತ್ತೇವೆ. ದಿನದ 24 ತಾಸು ಅವರನ್ನು ಕಾದು ಸದನದಲ್ಲಿ ಮತ್ತು ಹೊರಗೂ ತಕ್ಕಪಾಠ ಕಲಿಸಲಿದ್ದೇವೆ ಎಂದರು.