ಮಂಗಳೂರು, ಅ. 16 (DaijiworldNews/PY): ಕ್ಯಾನ್ಸರ್ ಪೀಡಿತ ಮಹಿಳೆಯ ಮುಖದಲ್ಲಿ ಮಂದಹಾಸ ಮೂಡಿಸಲು 20 ವರ್ಷದ ಯುವತಿಯೊಬ್ಬರು ತನ್ನ ಸುಂದರವಾದ ಕೂದಲನ್ನು ದಾನ ಮಾಡಿದ್ದಾಳೆ. ತನ್ನ ಸಂಬಂಧಿಕರೊಬ್ಬರು ಕೂದಲು ದಾನ ಮಾಡುವುದನ್ನು ಕಂಡಿದ್ದು, ಅದರಿಂದ ಪ್ರೇರಿಪಿತಗೊಂಡೆ ಎಂದು ಹೇಳಿದ್ದಾರೆ.


ದೇಲಂಪಾಡಿ ಮೂಲದ ಪ್ರಶಾಂತಿ ವಣಿಯಾನ್ (20) ಅವರು ತನ್ನ 14 ಇಂಚು ಉದ್ದದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ್ದಾರೆ. ಪುತ್ತೂರಿನ ದರ್ಬೆಯಲ್ಲಿನ ಸೈಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಯಾಗಿರುವ ಪ್ರಶಾಂತಿ ತನ್ನ ಕೂದಲನ್ನು ತ್ರಿಶೂರ್ನ ಮಿರಾಕಲ್ ಚಾರಿಟೇಬಲ್ ಅಸೋಸಿಯೇಷನ್ನ ಹೇರ್ ಬ್ಯಾಂಕ್ಗೆ ಶಿಫಾರಸು ಮಾಡಿದ್ದಾರೆ.
ಪ್ರತಿ ವರ್ಷ ನಾನು ನನ್ನ ಕೂದಲಿನ ಒಂದು ಇಂಚು ಕತ್ತರಿಸಿ ಎಸೆಯುತ್ತಿದ್ದೆ. ಆದರೆ, ಈ ವರ್ಷ ಒಳ್ಳೆಯ ಬದಲಾವಣೆಗಾಗಿ, ಒಂದು ಇಂಚು ಕತ್ತರಿಸುವ ಬದಲು ನನ್ನ ಕೂದಲಿನ 14 ಇಂಚುಗಳನ್ನು ಕತ್ತರಿಸಿ ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಿದ್ದೇನೆ. ನನ್ನ ಕೂದಲನ್ನು ದಾನ ಮಾಡಿದ್ದಕ್ಕಾಗಿ ನನ್ನ ಬಗ್ಗೆ ಹೆಮ್ಮೆ ಇದೆ. ಕ್ಯಾನ್ಸರ್ ರೋಗಿಗಳಿಗೆ ಹಾಘೂ ಅವರ ಮುಖದಲ್ಲಿ ಮಂದಹಾಸವನ್ನು ತರುವ ಈ ನನ್ನ ತೀರ್ಮಾನ ನನಗೆ ಸಂತಸವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ತನ್ನ ಕೂದಲನ್ನು ತ್ರಿಶೂರ್ನ ಮಿರಾಕಲ್ ಚಾರಿಟೇಬಲ್ ಅಸೋಸಿಯೇಷನ್ಗೆ ದಾನ ಮಾಡಿದ ನನ್ನ ಸಂಬಂಧಿ ರೇಷ್ಮಾ ರಾಮದಾಸ್ ನನಗೆ ಸ್ಫೂರ್ತಿ ಎಂದು ಪ್ರಶಾಂತಿ ತಿಳಿಸಿದ್ದಾರೆ.
ಕೂದಲು ದಾನ ಮಾಡುವ ನನ್ನ ನಿರ್ಧಾರಕ್ಕೆ ನನ್ನ ಕುಟುಂಬ ಮತ್ತು ಸ್ನೇಹಿತರು ಬೆಂಬಲ ನೀಡಿದ್ದಾರೆ. ಆರಂಭದಲ್ಲಿ, ಕೂದಲನ್ನು ಕತ್ತರಿಸುವ ನನ್ನ ನಿರ್ಧಾರವನ್ನು ಅವರು ಒಪ್ಪಿರಲಿಲ್ಲ. ಆದರೆ ಇದರ ಹಿಂದಿನ ಉದ್ದೇಶವನ್ನು ತಿಳಿದ ಬಳಿಕ ಪೋಷಕರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.