ಉಡುಪಿ, ಅ. 16 (DaijiworldNews/PY): ಜಿಲ್ಲೆಯ ಮಲ್ಪೆ ಬಾಪುತೋಟ ದಕ್ಕೆಯಲ್ಲಿ ಅ.14ರ ರಾತ್ರಿ ಕಾಲು ಜಾರಿ ದಕ್ಕೆಯ ನೀರಿಗೆ ಬಿದ್ದ ಮೀನುಗಾರರ ಮೃತದೇಹ ಅ.15ರ ಗುರುವಾರ ಮಲ್ಪೆ ಬಂದರಿನ ಸೂಪಿ ದಕ್ಕೆಯಲ್ಲಿ ಪತ್ತೆಯಾಗಿದೆ.

ಸಾಂದರ್ಭಿಕ ಚಿತ್ರ
ಮೃತರನ್ನು ಸಾಜು (45) ಎಂದು ಗುರುತಿಸಲಾಗಿದೆ.
ಸೆ.25ರಂದು ಕೇರಳ ರಾಜ್ಯಕರ್ಮಲ್ ಮಾದ ಎಂಬ ಮೀನುಗಾರಿಕೆ ಬೋಟಿನಲ್ಲಿ ಗ್ರೇಶಿಯಸ್ (34), ಪೈಸಸ್, ಆಂಟೋ, ಅಜಿ, ಬೈಜು ಮತ್ತು ಸಾಜು ಅವರು ಕೇರಳದ ಮೊನಂಬ ಬಂದರಿನಿಂದ ಮೀನುಗಾರಿಕೆಗೆ ಹೊರಟು ಸಮುದ್ರಕ್ಕೆ ತೆರಳಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿದ್ದರು. ಅ.14ರಂದು ಸಮುದ್ರದಲ್ಲಿ ಗಾಳಿ ಅಬ್ಬರವಿರುವುದರಿಂದ ಜಿಲ್ಲೆಯ ಮಲ್ಪೆ ಬಾಪುತೋಟಕ್ಕೆ ದಕ್ಕೆಯಲ್ಲಿ ಬೋಟನ್ನು ನಿಲ್ಲಿಸಿದ್ದಾರೆ.
ಅ.14ರ ರಾತ್ರಿ ಸುಮಾರು 11:30ಕ್ಕೆ ತಮ್ಮ ಬೋಟಿನಲ್ಲಿದ್ದ ಸಾಜು ಅವರು ದಕ್ಕೆಯ ನೀರಿಗೆ ಆಯತಪ್ಪಿ ಕಾಲು ಜಾರಿ ದಕ್ಕೆಯ ನೀರಿಗೆ ಬಿದ್ದಿದ್ದರು.ಬಳಿಕ ದೋಣಿಯಲ್ಲಿದ್ದ ಇತರರು ಎಷ್ಟೇ ಹುಡುಕಾಡಿದರೂ ಕೂಡಾ ಸಾಜು ಅವರು ಪತ್ತೆಯಾಗಲಿಲ್ಲ. ಈ ಬಗ್ಗೆ ಗ್ರೇಶಿಯಸ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದಾದ ಮರುದಿವಸ ಮಲ್ಪೆ ಬಂದರಿನ ಸೂಪಿ ದಕ್ಕೆಯಲ್ಲಿ ಸಾಜು ಅವರ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.