ಮಂಗಳೂರು,ಸೆ24: ಅಲ್ಜೀಮರ್ ಖಾಯಿಲೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಂಗಳೂರಿನ ಫಾರಂ ಫಿಝಾ ಮಾಲ್ ಹಾಗೂ ನಿಮ್ಹಾನ್ಸ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಪರ್ಪಲ್ ರನ್ ಗೆ ಇಂದು ಮುಂಜಾನೆ ಸುಮಾರು 5.30 ಕ್ಕೆ ಪೊಲೀಸ್ ಆಯುಕ್ತ ಟಿ. ಆರ್ ಸುರೇಶ್ ಕುಮಾರ್, ಚಾಲನೆ ನೀಡಿದರು. ಇದರೊಂದಿಗೆ ಏಕಕಾಲಕ್ಕೆ ಒಟ್ಟು, 5 ನಗರದಲ್ಲಿ ಅಂದರೆ ಬೆಂಗಳೂರಿನ ಕೋರಮಂಗಲ, ವೈಟ್ ಪೀಲ್ಡ್, ಮಂಗಳೂರು, ಹೈದರ್ ಬಾದ್ ಮತ್ತು ಚೆನೈನಲ್ಲಿ ಚಾಲನೆ ದೊರೆಯಿತು . ಭಾರತ ದೇಶದಲ್ಲಿ 40 ಲಕ್ಷಕ್ಕೂ ಹೆಚ್ಚು ಮಂದಿ ಅಲ್ಜೀಮರ್ ರೋಗಿಗಳಿದ್ದು, ಇದು ಜೀವವನ್ನೇ ಬಲಿ ತೆಗೆದುಕೊಳ್ಳುವ ದೊಡ್ಡ ರೋಗವಾಗಿದೆ. ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಂಗಳೂರಿನ ಫೋರಂ ಮಾಲ್ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ 2200 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಗಮನ ಸೆಳೆದ ಮೇಯರ್ ಓಟ:
ನವರಾತ್ರಿಗಾಗಿ 9 ದಿನಗಳ ಕಾಲ ಉಪವಾಸದಲ್ಲಿರುವ ಮೇಯರ್ ಕವಿತಾ ಸನಿಲ್ ಕೂಡಾ ಮ್ಯಾರಥಾನ್ ನಲ್ಲಿ ಭಾಗವಹಿಸಿ ಸುಮಾರು 3 ಕಿ ಮೀ ಓಡಿ ನೆರೆದಿದ್ದವರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಕಾಪೋರೇಟರ್ ದಿವಕರ್, ಫಾರಂ ಫಿಝಾ ಮಾಲ್ ಗ್ರೂಪ್ ನ ನಿರ್ದೇಶಕ ಫಾರೂಕ್, ಫಾರಂ ಫಿಝಾ ಮಾಲ್ ನ ಅಸಿಸ್ಟೆಂಟ್ ಸೆಂಟರ್ ಮ್ಯಾನೇಜರ್ ಫಯಾಜ್ ಎಮ್ ಎಚ್,ವೇಣು ಶರ್ಮ ಮತ್ತಿತರರು ಉಪಸ್ಥಿತರಿದ್ದರು.