ಉಡುಪಿ, ಅ.16 (DaijiworldNews/PY): ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವವರ ಮಕ್ಕಳಿಗೆ ವೈದ್ಯಕೀಯ ಶಿಕ್ಷಣದ ಸೀಟ್ ಹಂಚಿಕೆಯಲ್ಲಿ ವಿಶೇಷ ಕೋಟಾ ಕಲ್ಪಿಸುವಂತೆ ಉಡುಪಿ ಶಾಸಕ ರಘುಪತಿ ಭಟ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಸಿಎಂ ಅವರಿಗೆ ಬರೆದ ಪತ್ರದಲ್ಲಿ ಕಳೆದ ಆರು ತಿಂಗಳಿನಿಂದ ಅನೇಕ ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು ಹಾಗೂ ಇತರ ಅನೇಕ ಕೊರೊನಾ ಯೋಧರು ಹಗಲು-ರಾತ್ರಿ ಎನ್ನದೇ ಅವಿರತವಾಗಿ ಕೊರೊನಾ ಸೋಂಕಿತ ವ್ಯಕ್ತಿಗಳ ವೈದ್ಯೋಪಚಾರವನ್ನುಮಾಡುವಲ್ಲಿ ಶ್ರಮಿಸುತ್ತಿದ್ದಾರೆ. ಈ ಸಂದರ್ಭ ತಮ್ಮ ಕುಟುಂಬದ ಬಗ್ಗೆ ಹಾಗೂ ಮಕ್ಕಳ ಶೈಕ್ಷಣಿಕ ಅಭಿವೃದ್ದಿಯ ಕಡೆಗೆ ಹೆಚ್ಚಿನ ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ಇಲ್ಲಿಯವರೆಗೆ ರಾಜ್ಯದಲ್ಲಿ ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ವೇಳೆ ತಮ್ಮ ಜೀವವನ್ನು ತೆತ್ತಿರುವ ನಿದರ್ಶನಗಳಿ ಕೂಡಾ ಇವೆ ಎಂದು ತಿಳಿಸಿದ್ದಾರೆ.
ಆದ್ದರಿಂ ಕೊರೊನಾ ಫ್ರಟಂಡ್ ಲೈನ್ ವಾರಿಯರ್ಸ್ ಆಗಿ ಆಸ್ಪತ್ರೆ ಹಾಗೂ ಪರೋಕ್ಷವಾಗಿ ಇತರ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಕೊರೊನಾ ವಾರಿಯರ್ಸ್ಗಳ ಮಕ್ಕಲಿಗೆ ವೈದ್ಯಕೀಯ ಶಿಕ್ಷಣ ಸೀಟ್ ಮ್ಯಾಟ್ರಿಕ್ಸ್ನಲ್ಲಿ ವಿಶೇಷ ಕೋಟಾದಡಿಯಲ್ಲಿ ಆದ್ಯತೆಯನ್ನು ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.