ಉಡುಪಿ, ಅ. 17 (DaijiworldNews/MB) : ಮಾಸ್ಕ್ ಹಾಕದ ಸರ್ಕಾರಿ ಬಸ್ ಕಂಡಕ್ಟರ್ಗೆ ದಂಡ ವಿಧಿಸುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಕಂಡೆಕ್ಟರ್ನ್ನು ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆದಿದೆ.


ಉಡುಪಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ಕೊರೊನಾ ಜನಾಂದೋಲನ ಮಾಹಿತಿ ಕಾರ್ಯಕ್ರಮದ ನಂತರ, ಸಮೀಪದ ವಸತಿ ಸಂಕೀರ್ಣದ ಮನೆಗೆ ಕೊರೊನಾ ಜಾಗೃತಿ ಕುರಿತು ಸ್ಟಿಕರ್ ಅಳವಡಿಸಿ ಹೊರ ಬಂದ ಜಿಲ್ಲಾಧಿಕಾರಿ ಜಿ.ಜಗದೀಶ್, ರಸ್ತೆ ದಾಟುವಾಗ ಮುಂದೆ ಹಾದು ಹೋದ ಸರ್ಕಾರಿ ಬಸ್ನಲ್ಲಿ ಬಸ್ ಮುಂದುಗಡೆ ಕುಳಿತಿದ್ದ ಕಂಡಕ್ಟರ್ ಮಾಸ್ಕ್ ಧರಿಸದನ್ನು ಕಂಡು, ಬಸ್ ನಿಲ್ಲಿಸುವಂತೆ ಸೂಚಿಸಿ, ಕಂಡಕ್ಟರ್ಗೆ ಕೂಡಲೇ ದಂಡ ವಿಧಿಸುವಂತೆ ಸ್ಥಳದಲ್ಲಿದ್ದ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಾಹನದಲ್ಲಿದ್ದ ಇತರೆ ಪ್ರಯಾಣಿಕರು ಮಾಸ್ಕ್ ಧರಿಸದಿರುವುದನ್ನು ಕಂಡ ಜಿಲ್ಲಾಧಿಕಾರಿ ಅವರಿಗೂ ದಂಡ ವಿಧಿಸುವಂತೆ ಸೂಚಿಸಿ, ಕಂಡಕ್ಟರ್ ಮಾಸ್ಕ್ ಧರಿಸದೇ ಇದ್ದುದಲ್ಲದೇ, ಬಸ್ನಲ್ಲಿದ್ದ ಪ್ರಯಾಣಿಕರಿಗೆ ಮಾಸ್ಕ್ ಧರಿಸಲು ಸೂಚಿಸದಿರುವುದನ್ನು ಕಂಡು ತೀವ್ರ ತರಾಟೆಗೆ ತೆದುಕೊಂಡರು.