ಉಡುಪಿ, ಅ. 17 (DaijiworldNews/HR): ಜಿಲ್ಲೆಯಲ್ಲಿ ಒಟ್ಟು ರೂ 73,39,500 ಮೌಲ್ಯದ ಮಾದಕ ವಸ್ತುಗಳನ್ನು ವಶ ಪಡಿಸಿಕೊಂಡಿದ್ದು ,3 ಪ್ರಮುಖ ಪ್ರಕರಣಗಳನ್ನು ಬೇಧಿಸಿ, ಆರೋಪಿಗಳನ್ನು ಪತ್ತೆ ಹಚ್ಚಿ, ಸಿಂಥೆಟಿಕ್ ಡ್ರಗ್ಸ್ ನ್ನು ವಶಪಡಿಸಿಕೊಂಡು ಇಲ್ಲಿಯವರೆಗೆ 4 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.




ಉಡುಪಿ ಜಿಲ್ಲೆಯನ್ನು ಮಾದಕ ಮುಕ್ತ ಜಿಲ್ಲೆಯಾಗಿ ಮಾಡಬೇಕು. ಅದಕ್ಕಾಗಿ ಉಡುಪಿ ಪೋಲಿಸ್ ಇಲಾಖೆ ಹೋರಾಟ ನಡೆಸುತ್ತಿದ್ದೇವೆ. ಡ್ರಗ್ ಜಾಲದಲ್ಲಿ ತೊಡಗಿರುವವರನ್ನು ಒಬ್ಬರನ್ನು ಬಿಡುವುದಿಲ್ಲ, ಇದು ನಮ್ಮ ಗುರಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವಿರ್ಧನ್, ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅವರು ಇಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತ, ಕಳೆದ 5 ವರ್ಷಗಳಲ್ಲಿ ವರ್ಷದಲ್ಲಿ ಗಾಂಜಾ ಸೇವನೆ ಮಾರಾಟ, ಸಾಗಾಟ, ವಿದ್ಯಾರ್ಥಿ ಹಾಗೂ ಸಾರ್ವಜನಿಕರ ವಿರುದ್ಧ ಒಟ್ಟು 211 ಪ್ರಕರಣಗಳನ್ನ ದಾಖಲಿಸಲಾಗಿದ್ದು, 224 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಗಾಂಜಾ ಹೊರತುಪಡಿಸಿ ಸಿಂಥೆಟಿಕ್ ಡ್ರಗ್ಸ್ ಅನ್ನು ಉಡುಪಿ ಜಿಲ್ಲೆಯಲ್ಲಿ ವಶಪಡಿಸಿಕೊಳ್ಳುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ರಿವರ್ಸ್ ಇನ್ವೆಸ್ಟಿಗೇಷನ್ ಮೂಲಕ 10 ಮಂದಿಯನ್ನು ಬಂಧಿಸಲಾಗಿದೆ.
ಡ್ರಗ್ಸ್ ಗಾಂಜಾ ಪೂರೈಕೆ ಯಾವ ಮೂಲದಿಂದ ಬರುತ್ತಿದೆ ಎಂಬುದನ್ನು ಪತ್ತೆ ಹಚ್ಚ ಬೇಕಾಗಿದೆ. ತೀವ್ರ ಶೋಧನೆ ನಡೆಯುತ್ತಿದೆ. ಡಾರ್ಕ್ ವೆಬ್ ಮೂಲಕ ಹೆಚ್ಚು ವ್ಯವಹಾರ ನಡೆಯುತ್ತಿದೆ. ಆಘಾತಕಾರಿ ವಿಷಯವೇನೆಂದರೆ ಮಾದಕ ವಸ್ತು ಮಾರುವವರು ಮಣಿಪಾಲವನ್ನು ಗುರಿಯಾಗಿಸಿ ಕೊಂಡು ಬರುತ್ತಿದ್ದಾರೆ. ಇಂತಹ ಮಾದಕ ವಸ್ತು ಸೇವನೆ ವಿಚಾರದಲ್ಲಿ ವಿದ್ಯಾಲಯಗಳಿಗೂ ಅಂತಹ ವಿದ್ಯಾರ್ಥಿ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಇಲಾಖೆ ಸೂಚನಾ ಪತ್ರ ನೀಡಿದೆ.
ಈ ಎಲ್ಲಾ ದಾಳಿಗಳಲ್ಲಿ ಐಎಸ್ಡಿ ಉಡುಪಿ ಘಟಕ ಪೊಲೀಸ್ ನಿರೀಕ್ಷಕ ಮಧು, ಉಡುಪಿ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ನಾಗರಾಜ್, ಹಾಗೂ ಉಡುಪಿ ತಹಶೀಲ್ದಾರ್ ಪ್ರದೀಪ್ ಮತ್ತು ಅವರ ಸಿಬ್ಬಂದಿಯವರು ಕೂಡಾ ಸಹಕರಿಸಿರುತ್ತಾರೆ.
ಜಿಲ್ಲೆಯಲ್ಲಿ ಗಾಂಜಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿಡಲು ಕ್ರಮ ತೆಗೆದುಕೊಳ್ಳಲಾಗಿದೆ. ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ವಿಷ್ಣುವರ್ಧನರವರ ಮಾರ್ಗದರ್ಶನದಂತೆ, ಹೆಚ್ಚುವರಿ ಪೊಲೀಸ್ ಅಧಿಕಾರಿ ಕುಮಾರಚಂದ್ರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ.
ಈ ಎಲ್ಲಾ ದಾಳಿಗಳಲ್ಲಿ ಐಎಸ್ಡಿ ಉಡುಪಿ ಘಟಕ ಪೊಲೀಸ್ ನಿರೀಕ್ಷಕ ಮಧು, ಉಡುಪಿ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ನಾಗರಾಜ್, ಹಾಗೂ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಮತ್ತು ಅವರ ಸಿಬ್ಬಂದಿಯವರು ಕೂಡಾ ಸಹಕರಿಸಿರುತ್ತಾರೆ.
ಪತ್ರಿಕಾ ಗೋಷ್ಠಿಯಲ್ಲಿ , ಹೆಚ್ಚುವರಿ ಪೊಲೀಸ್ ಅಧಿಕಾರಿ ಕುಮಾರಚಂದ್ರ ಮಂಜುನಾಥ ಎಂ., ಪೊಲೀಸ್ ನಿರೀಕ್ಷಕರು, ಮಣಿಪಾಲ ಠಾಣೆ, ಹರಿರಾಂ ಶಂಕರ್, ಸಹಾಯಕ ಪೊಲೀಸ್ ಅಧೀಕ್ಷಕರು, ಕುಂದಾಪುರ ಉಪವಿಭಾಗ , ಭರತ್ ಎಸ್. ರೆಡ್ಡಿ, ಪೊಲೀಸ್ ಉಪಾಧೀಕ್ಷಕರು, ಕಾರ್ಕಳ ಉಪವಿಭಾಗ, ಮಂಜುನಾಥ ಎಂ., ಪೊಲೀಸ್ ನಿರೀಕ್ಷಕರು, ಮಣಿಪಾಲ ಠಾಣೆ, ರಾಜಶೇಖರ ಪಂದ್ಯ, ಪೊಲೀಸ್ ಉಪ ನಿರೀಕ್ಷಕರು, ಮಣಿಪಾಲ ಠಾಣೆ, ಮಂಜುನಾಥ, ಮೊಲೀಸ್ ವೃತ್ತ ನಿರೀಕ್ಷಕರು, ಉಡುಪಿ , ರಾಘವೇಂದ್ರ, ಪೊಲೀಸ್ ಉಪ ನಿರೀಕ್ಷಕರು, ಬ್ರಹ್ಮಾವರ ಠಾಣೆ , ಪೊಲೀಸ್ ನಿರೀಕ್ಷಕ ಮಧು ಉಪಸ್ಥಿತರಿದ್ದರು.