ಕಾರ್ಕಳ, ಅ. 17 (DaijiworldNews/SM): ನಗರದ ರಥಬೀದಿಯಲ್ಲಿ ವೃದ್ಧರೊಬ್ಬರು ನೇಣುಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಕೃಷ್ಣ ಯಾನೆ ಕಿಟ್ಟ(೬೫) ಎಂಬರು ಆತ್ಮಹತ್ಯೆ ಮಾಡಿಕೊಂಡವರು.

ಕ್ಯಾಟರಸ್ ಕೆಲಸ ಮಾಡುತ್ತಿದ್ದ ಅವರು ಅವಿವಾಹಿತರಾಗಿದ್ದುಕೊಂಡು ಸಹೋದರನೊಂದಿಗೆ ರಥಬೀದಿಯ ಮನೆಯೊಂದರಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.