ಮಂಗಳೂರು, ಅ. 18 (DaijiworldNews/PY): ಸನ್ ಪ್ರೀಮಿಯಂ ಸನ್ ಫ್ಲವರ್ ಆಯಿಲ್ ತಯಾರಿಕಾ ಸಂಸ್ಥೆಯಾದ ಶ್ರೀ ಅನಘ ರಿಫೈನರೀಸ್ ಪ್ರೈವೇಟ್ ಲಿಮಿಟೆಡ್ ತನ್ನ ಹೊಸ ಉತ್ಪನ್ನವಾದ ಸನ್ ಪ್ರೀಮಿಯಂ ಚಪಾತಿ ಹಿಟ್ಟು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.


ಮಾರುಕಟ್ಟೆ ವಿಸ್ತರಣೆ ಯೋಜನೆಯಡಿ ಮಂಗಳೂರು ಮೂಲದ ಶ್ರೀ ಅನಘ ರಿಫೈನರೀಸ್ ತನ್ನ ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಿದ್ದು, ಸನ್ ಪ್ರೀಮಿಯಂ ಚಪಾತಿ ಹಿಟ್ಟು ಅನ್ನು ವೈಜ್ಞಾನಿಕ ರೀತಿಯಲ್ಲಿ ಕೃಷಿಕರು ಬೆಳೆದ ಸತ್ವಭರಿತವಾದ ಗೋಧಿಯಿಂದ ತಯಾರು ಮಾಡಲಾಗಿದೆ.
ಮೃದು, ಸ್ವಾದಿಷ್ಷ, ಪೌಷ್ಟಿಕದಾಯಕ ಹಾಗೂ ರುಚಿಯಾದ ಚಪಾತಿಯನ್ನು ತಯಾರಿಸಬಹುದು. ಇದರಲ್ಲಿ ಅಧಿಕ ಪ್ರೊಟೀನ್, ಕಾರ್ಬೋಹೈಡ್ರೇಟ್ ಹಾಗೂ ಫೈಬರ್ ಅಂಶಗಳಿರುವ ಸನ್ ಪ್ರೀಮಿಯಂ ಚಪಾತಿ ಹಿಟ್ಟನ್ನು ವೈಜ್ಞಾನಿಕ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪ್ಯಾಕಿಂಗ್ ಮಾಡಲಾಗುತ್ತದೆ.
ಭಾರತೀಯ ಅಡುಗೆಯಲ್ಲಿ ಗೋಧಿಗೆ ಪ್ರಮುಖ ಸ್ಥಾನವಿದೆ. ಈ ಮಹತ್ವದ ಅಂಶವನ್ನು ಗಮನದಲ್ಲಿಟ್ಟುಕೊಂಡು ಮಂಗಳೂರು ಮೂಲದ ಶ್ರೀ ಅನಘಾ ರಿಫೈನರೀಸ್ ಪ್ರೈವೇಟ್ ಲಿಮಿಟೆಡ್ ತನ್ನ ಹೊಸ ಸನ್ ಪ್ರೀಮಿಯಂ ಚಪಾತಿ ಹಿಟ್ಟನ್ನು ತಯಾರಿಸಿದ್ದು, ಇದು ಶೇ.100ರಷ್ಟು ಗೋಧಿ ಹಿಟ್ಟು ಆಗಿದೆ. ಪ್ರತಿಯೊಂದು ಹಂತದಲ್ಲೂ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗುತ್ತಿದ್ದು, ಉತ್ಪಾದನೆಯ ಪ್ರತಿಯೊಂದು ಹಂತದಲ್ಲೂ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ.
ಗೋಧಿಯನ್ನು ರಾಸಾಯನಿಕಗಳಿಂದ ಮುಕ್ತವಾದ ನೈಸರ್ಗಿಕ ರೀತಿಯಲ್ಲಿ ಸಂಸ್ಕರಿಸಲಾಗಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ 1 ಕೆಜಿ ಮತ್ತು 5 ಕೆಜಿ ಪ್ಯಾಕ್ಗಳಲ್ಲಿ ಬಿಡುಡಗಡೆ ಮಾಡಲಾಗಿದೆ. ತೂಕ ಹಾಗೂ ಅಳತೆಯಲ್ಲೂ ಕೂಡಾ ಗ್ರಾಹಕನಿಗೆ ಮೋಸವಾಗದಂತೆ ಕಂಪೆನಿ ಎಚ್ಚರಿಕೆ ವಹಿಸಿದೆ.
ಶ್ರೀ ಅನಘ ರಿಫೈನರೀಸ್ ಪ್ರೈವೇಟ್ ಲಿಮಿಟೆಡ್ ತನ್ನ ಸನ್ ಪ್ರೀಮಿಯಂ ಸನ್ ಫ್ಲವರ್ ಆಯಿಲ್ ಉತ್ಪನ್ನದ ಮೂಲಕ ಹೆಸರುವಾಸಿಯಾಗಿದ್ದು, ಇದೀಗ ತನ್ನ ಮತ್ತೊಂದು ಉತ್ತಮ ಗುಣಮಟ್ಟದ ಉತ್ಪನ್ನದೊಂದಿಗೆ ಗ್ರಾಹಕರನ್ನು ಆನಂದಿಸಲು ಸಜ್ಜಾಗಿದೆ.