ಮಂಗಳೂರು, ಅ. 18 (DaijiworldNews/PY): ಪಣಂಬೂರು ಬೀಚ್ನ ನೀರಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಬೀಚ್ನ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಜೀವ ರಕ್ಷಕ ಪಡೆಯ ಸಿಬ್ಬಂದಿಗಳು ಅಕ್ಟೋಬರ್ 18ರ ಭಾನುವಾರದಂದು ರಕ್ಷಿಸಿದ್ದಾರೆ.


10 ಮಂದಿ ಸ್ನೇಹಿತರ ಗುಂಪು ವಿಹಾರಕ್ಕೆಂದು ಬೀಚ್ಗೆ ಬಂದಿದ್ದು, ಈ ವೇಳೆ ಆಟವಾಡುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.
ಇಬ್ಬರು ವ್ಯಕ್ತಿಗಳನ್ನು ವಿಜಯಪುರದ ಇಟಗಿ ಮೂಲದ ಶರಣಪ್ಪ (35) ಮತ್ತು ಇಲ್ಲಿನ ಜೋಕಟ್ಟೆ ನಿವಾಸಿ ನಾಗರಾಜ್ ಎಚ್ ಎಸ್ (18) ಎಂದು ಗುರುತಿಸಲಾಗಿದೆ.
ಘಟನೆಯ ಸಂಭವಿಸಿದ ಸಂದರ್ಭ ಅದೃಷ್ಟವಶಾತ್ ಕರ್ತವ್ಯದಲ್ಲಿದ್ದ ಜೀವ ರಕ್ಷಕ ಪಡೆ ಸಿಬ್ಬಂದಿಗಳು ಅವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ
2008 ರಲ್ಲಿ ಪಣಂಬೂರ್ ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಜೀವರಕ್ಷಕ ಪಡೆಯ ಸಿಬ್ಬಂದಿಗಳು ಬೀಚ್ಗೆ ಭೇಟಿ ನೀಡುವವರ ಸುರಕ್ಷತೆಯ ಜವಾಬ್ದಾರಿಯನ್ನು ವಹಿಸಿಕೊಂಡಾಗಿನಿಂದಲೂ ಇಂತಹ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆಯಾಗಿದೆ.