ಮಂಗಳೂರು, ಅ. 19 (DaijiworldNews/PY): ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ) ದ.ಕ ಮತ್ತುಉಡುಪಿ ಜಿಲ್ಲೆ ಇದರ 13ನೇ ವಾರ್ಷಿಕ ಮಹಾಸಭೆ ಅ.18ರ ಭಾನುವಾರದಂದು ಮಂಗಳೂರಿನ ಕಾರ್ಸ್ಟ್ರೀಟ್ನಲ್ಲಿರುವ ಬಿಎಎಂ ಹೈಸ್ಕೂಲ್ ಸಭಾಂಗಣದಲ್ಲಿ ನೆರವೇರಿತು.

ಅಧ್ಯಕ್ಷರಾಗಿ ಮೊಹಮ್ಮದ್ ಇಕ್ಬಾಲ್ ಅವರು ಪುನರಾಯ್ಕೆಯಾದರು. ಈ ಸಂದರ್ಭದಲ್ಲಿ ಸ್ಥಾಪಕ ಅಧ್ಯಕ್ಷ ಸದಾಶಿವದಾಸ್ ಪಾಂಡೇಶ್ವರ್ ಉಪಸ್ಥಿತರಿದ್ದರು.
ಸಂಘದ ಕಾನೂನು ಸಲಹೆಗಾರರಾದ ನಗರದ ಖ್ಯಾತ ವಕೀಲರಾದ ಸತೀಶ್ ಭಟ್ ಅವರು ಚುನಾವಣಾ ಕಾರ್ಯವನ್ನು ನಡೆಸಿಕೊಟ್ಟರು. ರಮೇಶ್ ಸಾಲಿಯಾನ್ ಅವರು 2019-20ರ ವರದಿ ಹಾಗೂ ಲೆಕ್ಕಪತ್ರವನ್ನು ಸಭೆಗೆ ಮಂಡಿಸಿದರು.
ಅಧ್ಯಕ್ಷರಾಗಿ ಮೊಹಮ್ಮದ್ ಇಕ್ಬಾಲ್ ಉಪಾಧ್ಯಕ್ಷರಾಗಿ ಮಲ್ಲಿಕಾ ಶೆಟ್ಟಿ, ಮುಕ್ತಾ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ, ರಮೇಶ್ ಸಾಲಿಯಾನ್, ಜೊತೆ ಕಾರ್ಯದರ್ಶಿಯಾಗಿ ಜ್ಯೊತಿ ಚಂದ್ರಶೇಖರ್, ಪ್ರಜ್ವಲ್ ಆಚಾರ್ಯ, ಖಜಾಂಚಿಯಾಗಿ ಐವನ್ ರಿಚರ್ಡ್ ಡಿ'ಸೋಜ, ಸಂಘಟನಾ ಕಾರ್ಯದರ್ಶಿಯಾಗಿ, ಕ್ರಷ್ಣಪ್ರಸಾದ್, ಸುಭಾಶಿತ್, ಸಂಚಾಲಕರಾಗಿ, ಮೋಹನ್ ಪ್ರಸಾದ್ ನಂತೂರು, ಶರತ್ ಉಚ್ಚಿಲ್, ಕಮಿಟಿ ಸದಸ್ಯರುಗಳಾಗಿ, ರಂಜನ್ ದಾಸ್, ಧನುರಾಜ್ ಎನ್ಎಂಪಿಟಿ, ಸಂತೋಶ್ ಆಂಚನ್, ದಿನಕರ್ ಪಾಂಡೇಶ್ವರ, ಹುಸೈನ್ ಕಾಟಿಪಳ್ಳ, ಕೆವಿನ್ ಮಿಸ್ಕಿತ್, ಕೇಶವ ಕನಿಲ, ರಾಧಾಕೃಷ್ಣ ಭಟ್, ಜನಾರ್ಧನ ಪದ್ಮಶಾಲಿ, ಸ್ವಪ್ನಾ ರಾಜ್ ಆಯ್ಕೆಯಾದರು.
ರಮೇಶ್ ಸಾಲಿಯಾನ್ ಅವರು ಧನ್ಯವಾದ ಕಾರ್ಯವನ್ನು ನಡೆಸಿಕೊಟ್ಟರು. ಕೃಷ್ಣಪ್ರಸಾದ್ ಅವರು ಕಾರ್ಯಕ್ರಮ ನಿರೂಪಿಸಿದರು.