ಮಂಗಳೂರು, ಅ. 19 (DaijiworldNews/MB) : ಜಿಲ್ಲೆಯಲ್ಲೀಗ ನವರಾತ್ರಿ ಸಂಭ್ರಮ. ಈ ಕೊರೊನಾ ಕಾರಣದಿಂದಾಗಿ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆಯಾದರೂ ದೇವಾಲಯಗಳಲ್ಲಿ ಭಕ್ತರ ದಿಂಡು ಎಲ್ಲಾ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಕೆಯೊಂದಿಗೆ ಆಗಮಿಸುತ್ತಿದೆ. ಈ ನಡುವೆ ಒಂಬತ್ತು ವರ್ಷದ ಬಾಲಕಿಯೋರ್ವರು ನವದೇವಿ ಸ್ವರೂಪಿಯಾಗಿ ಶೋಭಿಸಿದ್ದಾರೆ.




ಯಜಮಾನ ಇಂಡಸ್ಟ್ರೀಸ್ನ ಮಾಲೀಕರಾದ ಟಿ ವರದರಾಜ್ ಪೈ, ಸಂಧ್ಯಾ ವರದರಾಜ್ ಪೈ ದಂಪತಿಯ ಪುತ್ರಿಯಾದ ಒಂಬತ್ತು ವರ್ಷದ ಬಾಲಕಿ ವಿಷ್ಣುಪ್ರಿಯಾ ಪೈ ಅವರು ಮೂಡುಬಿದಿರೆಯ ರೋಟರಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದು ಪಠ್ಯ ಚಟುವಟಿಕೆ ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲೂ ಮುಂಚೂಣಿಯಾಗಿದ್ದಾರೆ. ಗಾಯನ, ನೃತ್ಯ, ಚಿತ್ರಕಲೆಯಲ್ಲಿ ಅತೀವ ಆಸಕ್ತಿ ಹೊಂದಿರುವ ಈ ಬಾಲಕಿ ಈ ಎಲ್ಲಾ ಕ್ಷೇತ್ರದಲ್ಲೂ ತನ್ನ ಹೆಗ್ಗುರುತು ಮೂಡಿಸುವತ್ತ ಚಿತ್ತ ನೆಟ್ಟಿದ್ದಾರೆ.















ನವರಾತ್ರಿಯ ಈ ಶುಭ ಸಂದರ್ಭದಲ್ಲಿ ವಿಷ್ಣುಪ್ರಿಯಾ ಪೈ ನವ ದೇವಿ ಸ್ವರೂಪಿಯಾಗಿ ಕಂಗೊಳಿಸಿದ್ದಾರೆ. ದೇವಿ ಮಾತಂಗಿ, ಬ್ರಹ್ಮಚಾರಿಣಿ, ಮಾತೆ ದುರ್ಗಾ, ಸರಸ್ವತಿ, ಸ್ಕಂದ ಮಾತಾ, ಲಕ್ಷ್ಮೀ, ಮಹಾಕಾಳಿ, ಮಹಾಗೌರಿ, ಶಾರದೆ ಸ್ವರೂಪಿಯಾಗಿ ವಿಷ್ಣುಪ್ರಿಯಾ ಪೈ ಶೋಭಿಸಿದ್ದಾರೆ.
ಕುದ್ರೋಳಿ ದೇವಸ್ಥಾನದ ನವದುರ್ಗೆಯರಿಗೆ ಪ್ರಸಾದನ ಮಾಡಿದ ಅನುಭವವಿರುವ ಪ್ರಸಾದನ ಕಲಾವಿದೆ ಶ್ರದ್ಧಾ ಅಶ್ವಿನಿ ಪ್ರಭು ಅವರು ವಿಷ್ಣುಪ್ರಿಯಾ ಪೈ ಅವರಿಗೆ ನವದೇವಿಯರ ಪ್ರಸಾದನವನ್ನು ಅದ್ಭುತವಾಗಿ ಮಾಡಿದ್ದು ಖ್ಯಾತ ಛಾಯಾಗ್ರಾಹಕ ಪುಣಿಕ್ ಶೆಟ್ಟಿ ಅವರು ನವದೇವಿ ಸ್ವರೂಪಿಯಾದ ವಿಷ್ಣುಪ್ರಿಯಾ ಅವರ ಚಿತ್ರವನ್ನು ತಮ್ಮ ಕ್ಯಾಮೆರಾದ ಕಣ್ಣಲ್ಲಿ ಸುಂದರವಾಗಿ ಸೆರೆ ಹಿಡಿದಿದ್ದಾರೆ.