ಕಾಸರಗೋಡು, ಅ. 19 (DaijiworldNews/SM): ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮದಿಂದಾಗಿ ಅಲ್ಪ ಮಟ್ಟಿನಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಸೋಮವಾರದಂದು 120 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಈ ನಡುವೆ ಗುಣಮುಖರಾಗುವವರ ಸಂಖ್ಯೆ ಉತ್ತಮವಾಗಿದ್ದು, 203 ಮಂದಿ ಗುಣಮುಖರಾಗಿದ್ದಾರೆ.

107 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ವಿದೇಶದಿಂದ ಬಂದ 7, ಹೊರರಾಜ್ಯಗಳಿಂದ ಬಂದ ಆರು ಮಂದಿಗೆ ಸೋಂಕು ಪತ್ತೆಯಾಗಿದೆ. ಏಳು ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 16, 745 ಮಂದಿಗೆ ಸೋಂಕು ದೃಢಪಟ್ಟಿದೆ. 13,478 ಮಂದಿ ಗುಣಮುಖರಾಗಿದ್ದಾರೆ.
3107 ಮಂದಿ ಸದ್ಯ ಚಿಕಿತ್ಸೆಯಲ್ಲಿದ್ದಾರೆ. 4606 ಮಂದಿ ನಿಗಾದಲ್ಲಿದ್ದಾರೆ. 908 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.