ಸುಳ್ಯ, ಅ. 19 (DaijiworldNews/SM): ಪ್ರೀತಿಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವ ಜೋಡಿಯೊಂದು ಒಂದೇ ಹಗ್ಗಕ್ಕೆ ಕೊರಳೊಡ್ಡಿ ಸಾವಿಗೆ ಶರಣಾದ ಘಟನೆ ತಾಲೂಕಿನ ವಸತಿ ಗೃಹವೊಂದರಲ್ಲಿ ನಡೆದಿದೆ.

ಸುಳ್ಯ ತಾಲೂಕಿನ ಕಟ್ಟತ್ತಾರು ನಿವಾಸಿ ದರ್ಶನ್(19) ಹಾಗೂ ಧರ್ಮಸ್ಥಳ ಸಮೀದ ಕಾಯರ್ತ್ಕಡ್ಕದ ಇಂದಿರಾ(19) ಆತ್ಮಹತ್ಯೆ ಮಾಡಿಕೊಂಡವರೆಂದು ಗುರುತಿಸಲಾಗಿದೆ. ಯುವ ಜೋಡಿ ವಸತಿ ಗೃಹದಲ್ಲಿ ತಂಗಿತ್ತು ಎನ್ನಲಾಗಿದೆ. ಈ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ವಸತಿ ಗೃಹದ ಸಿಬ್ಬಂದಿ ಕಿಟಕಿ ಮೂಲಕ ನೋಡಿದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ತಕ್ಷಣವೇ ವಸತಿ ಗೃಹದವರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇನ್ನು ಈಗಾಗಲೇ ಯುವಕನ ಮನೆಯವರು ಸ್ಥಳಕ್ಕಾಗಮಿಸಿದ್ದು, ಯುವತಿಯ ಕುಟುಂಬಸ್ಥರು ಬಂದ ಬಳಿಕ ವಸತಿ ಗೃಹದ ಬಾಗಿಲು ತೆಗೆಯಲು ನಿರ್ಧರಿಸಲಾಗಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.