ಮಂಗಳೂರು, ಅ. 19 (DaijiworldNews/SM): ದ.ಕ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳ ಬಳಿಕ ಇದೀಗ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಸೋಮವಾರದಂದು ದ.ಕ. ಜಿಲ್ಲೆಯಲ್ಲಿ 107 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಕಳೆದ ಕೆಲ ತಿಂಗಳ ಬಳಿಕ ಜಿಲ್ಲೆಯಲ್ಲಿ ಇದೇ ಮೊದಲು ಎಂಬಂತೆ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿರುವಂತಹದು. ಇನ್ನು ಇಂದು ಗುಣಮುಖರಾದವರ ಸಂಖ್ಯೆಯೂ ಕೂಡ ಉತ್ತಮವಾಗಿದೆ. ಸೋಮವಾರದಂದು 398 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ದ.ಕ. ಜಿಲ್ಲೆಯ ಇಂದಿನ ಕೊರೋನಾ ವರದಿ:
ಒಟ್ಟು ಪರೀಕ್ಷೆಗೆ ಒಳಪಟ್ಟವರು 2,26,133 ಮಂದಿ
ಪತ್ತೆಯಾದ ಒಟ್ಟು ನೆಗೆಟಿವ್ ಪ್ರಕರಣಗಳು-1,97,712
ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಪಾಸಿಟಿವ್ ಕೇಸ್-28421
ಸೋಮವಾರದಂದು ಪತ್ತೆಯಾದ ಪಾಸಿಟಿವ್ ಕೇಸ್-107
ಸೋಮವಾರದಂದು ಗುಣಮುಖರಾದವರು-398 ಮಂದಿ
ಒಟ್ಟು ಗುಣಮುಖರಾಗಿ ಬಿಡುಗಡೆ-24686 ಮಂದಿ
ಸೋಮವಾರದಂದು ಸೋಂಕಿಗೆ ಬಲಿಯಾದವರು-6 ಮಂದಿ
ಒಟ್ಟು ಸಾವಿನ ಸಂಖ್ಯೆ 637ಕ್ಕೆ ಏರಿಕೆ
ಪ್ರಸ್ತುತ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು 3098 ಮಂದಿ