ಬಂಟ್ವಾಳ, ಅ. 20 (DaijiworldNews/HR): ಅನುಮಾನಾಸ್ಪದ ರೀತಿಯಲ್ಲಿ ಮೂರ್ತೆದಾರರೊಬ್ಬರು ಸಾವನ್ನಪ್ಪಿರುವ ಘಟನೆ ಬಂಟ್ವಾಳ ಪೊಲೀಸ್ ಠಾಣೆ ವ್ಯಾಪ್ತಿಯ ಕಾರ್ಪೆಯಲ್ಲಿ ನಡೆದಿದೆ.

ಮೃತನನ್ನು ಕಾರ್ಪೆ ಮೂಲದ ನಾರಾಯಣ ಪೂಜಾರಿ (50) ಎಂದು ಗುರುತಿಸಲಾಗಿದೆ.
ಮೂರ್ತೆದಾರರಾಗಿ ಆಗಿ ಕೆಲಸ ಮಾಡುತ್ತಿದ್ದ ಅವರು, ಎಂದಿನಂತೆ ನಿನ್ನೆ ಕೆಲಸಕಾಗಿ ಮನೆಯಿಂದ ಹೊರಟಿದ್ದವರು ರಾತ್ರಿಯಾದರೂ ಮನೆಗೆ ಹಿಂದಿರುಗದ ಕಾರಣ ಅವರ ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರು ಅವರನ್ನು ಹುಡುಕಲು ಹೋಗಿದ್ದು, ಮೂರ್ತೆ ಮಾಡುವ ಮರದ ಕೆಳಗೆ ಅವರ ಮೃತ ದೇಹ ಪತ್ತೆಯಾಗಿದೆ.
ಅವರ ಸಾವಿನ ಬಗ್ಗೆ ಹಲವು ಅನುಮಾನಗಳಿವೆ ವ್ಯಕ್ತವಾಗಿದ್ದು, ಪೊಲೀಸ್ ಇಲಾಖೆಯ ತನಿಖೆಯ ನಂತರವೇ ಸತ್ಯ ಹೊರಬರಲಿದೆ.
ಪೂಜಾರಿ ಸಾವಿನ ಬಗ್ಗೆ ಈಗಾಗಲೇ ವದಂತಿಗಳು ಹಬ್ಬುತ್ತಿವೆ. ಬಂಟ್ವಾಳ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಟಿ.ಡಿ.ನಗರಾಜ್, ಬಂಟ್ವಾಳ ಗ್ರಾಮೀಣ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಸನ್ನ ಸೇರಿದಂತೆ ಇತರರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.