ಕಾಸರಗೋಡು, ಅ. 20 (DaijiworldNews/MB) : ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗಿದ್ದು ಮಂಗಳವಾರ 145 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.

ಈ 145 ಮಂದಿಯ ಪೈಕಿ 141 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಹೊರರಾಜ್ಯಗಳಿಂದ ಬಂದ ಮೂರು ಹಾಗೂ ವಿದೇಶದಿಂದ ಬಂದ ಓರ್ವನಿಗೆ ಸೋಂಕು ಪತ್ತೆಯಾಗಿದೆ.
409 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 16, 890 ಮಂದಿಗೆ ಸೋಂಕು ತಗುಲಿದೆ. 13,887 ಮಂದಿ ಗುಣಮುಖರಾಗಿದ್ದಾರೆ. 162 ಮಂದಿ ಮೃತಪಟ್ಟಿದ್ದಾರೆ. 4,535 ಮಂದಿ ನಿಗಾದಲ್ಲಿದ್ದಾರೆ.