ಮಂಗಳೂರು, ಅ 20 (DaijiworldNews/SM): ಕಳೆದ ಕೆಲವು ದಿನಗಳಿಂದ ದ.ಕ. ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಸ್ವಲ್ಪ ಸ್ವಲ್ಪವೇ ಕಡಿಮೆಯಾಗುತ್ತಿದೆ. ಮಂಗಳವಾರದಂದು ದ.ಕ. ಜಿಲ್ಲೆಯಲ್ಲಿ 146 ಮಂದಿಯಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಇನ್ನು ಉಡುಪಿ ಜಿಲ್ಲೆಯಲ್ಲಿ 136 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಆ ಮೂಲಕ ಕೆಳೆದ ಕೆಲವು ದಿನಗಳಿಂದ ಇದ್ದಂತಹ ಏರಿಕೆಯ ಪ್ರಮಾಣಕ್ಕೆ ಅಲ್ಪ ಬ್ರೇಕ್ ಬಿದ್ದಂತಾಗಿದೆ.

ದ.ಕ. ಜಿಲ್ಲೆಯ ಇಂದಿನ ಕೊರೋನಾ ವರದಿ:
ದ.ಕ. ಜಿಲ್ಲೆಯಲ್ಲಿ ಒಟ್ಟು ಪರೀಕ್ಷೆಗೊಳಪಟ್ಟವರು-229948
ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ನೆಗೆಟಿವ್ ಪ್ರಕರಣಗಳು-201381
ಇಲ್ಲಿಯ ತನಕ ಪತ್ತೆಯಾದ ಒಟ್ಟು ಪಾಸಿಟಿವ್ ಕೇಸ್ ಗಳು-28567
ಮಂಗಳವಾರದಂದು ಪತ್ತೆಯಾದ ಪಾಸಿಟಿವ್ ಕೇಸ್ ಗಳು-146
ಮಂಗಳವಾರದಂದು ಜಿಲ್ಲೆಯಲ್ಲಿ ಗುಣಮುಖರಾದವರು-299 ಮಂದಿ
ಜಿಲ್ಲೆಯಲ್ಲಿ ಒಟ್ಟು ಗುಣಮುಖರಾದವರು-24985 ಮಂದಿ
ಮಂಗಳವಾರದಂದು ಸೋಂಕಿಗೆ ನಾಲ್ವರು ಬಲಿ
ಜಿಲ್ಲೆಯಲ್ಲಿ ಒಟ್ಟು ಕೊರೋನಾ ಸಾವು-641
ಪ್ರಸ್ತುತ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು-2941 ಮಂದಿ
ಉಡುಪಿ ಜಿಲ್ಲೆಯ ಇಂದಿನ ಕೊರೋನಾ ರಿಪೋರ್ಟ್:
ಉಡುಪಿಯಲ್ಲಿ ಮಂಗಳವಾರ 136 ಮಂದಿಯಲ್ಲಿ ಸೋಂಕು
ಮಂಗಳವಾರದಂದು ಪರೀಕ್ಷೆಗೊಳಪಟ್ಟವರು-1887 ಮಂದಿ
ಮಂಗಳವಾರದಂದು 1789 ಮಂದಿಯ ವರದಿ ನೆಗೆಟಿವ್
ಮಂಗಳವಾರದಂದು 219 ಮಂದಿ ಗುಣಮುಖ
1742 ಜಿಲ್ಲೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿರುವವರು
ಉಡುಪಿ ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 176
ಒಟ್ಟು ಗುಣಮುಖರಾಗಿ ಬಿಡುಗಡೆಗೊಂಡವರು 19114
ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಪಾಸಿಟಿವ್ 20994