ಸುಳ್ಯ, ಅ 20 (DaijiworldNews/SM): ತಾಲೂಕಿನಲ್ಲಿ ನಡೆದ ಜೋಡಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಮಂದಿ ಪ್ರೀತಿ ನಿರಾಕರಿಸಿದ್ದೇ ಕಾರಣ ಎನ್ನಲಾಗುತ್ತಿದೆ. ಪ್ರೀತಿಗೆ ಮನೆಯವರ ವಿರೋಧವೆ ಆತ್ಮ ಹತ್ಯೆಗೆ ಕಾರಣವಾಯಿತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಕಟ್ಟತ್ತಾರು ತಿಮ್ಮಪ್ಪ ಗೌಡ ಅವರ ಪುತ್ರ ದರ್ಶನ ಹಾಗೂ ಧರ್ಮಸ್ಥಳ ಕಾರ್ಯಕಲ್ಕಜೆ ಶೇಷಪ್ಪ ಗೌಡರ ಪುತ್ರಿ ಇಂದಿರಾ ಕಳೆದ 6 ತಿಂಗಳಿಂದ ಒಬ್ಬರನ್ನೊಬ್ಬರು ಗಾಡವಾಗಿ ಪ್ರೀತಿಸುತ್ತಿದ್ದರು. ಆದರೆ, ಇವರ ಪ್ರೀತಿಗೆ ಮನೆ ಮಂದಿಯಿಂದ ವಿರೋಧ ಇತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಸುಳ್ಯದ ವಸತಿ ಗೃಹದಲ್ಲಿ ಚೂಡಿದರ ವೇಲ್ ಗೆ ಕೊರಳೊಡ್ಡಿ ನೇಣಿಗೆ ಶರಣಾಗಿದ್ದರು.
ಯುವತಿ ಇಂದಿರಾ ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸದಲ್ಲಿದ್ದಳು. ಆಕೆಯ ವಸತಿ ಗೃಹದ ಪಕ್ಕದ ಹೊಟೇಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ ದರ್ಶನ ಪರಿಚಯವಾಗಿ ಪೋನ್ ನಂಬರ್ ಹಂಚಿಕೊಂಡು ಮಾತನಾಡಲು ಶುರು ಮಾಡಿದ್ದರು. ಗೆಳತನವಾಗಿ ಬಳಿಕ ಗೆಳತನ ಪ್ರೀತಿಗೆ ತಿರುಗಿತ್ತು. ಬಳಿಕ ಜೋಡಿ ತಿರುಗಾಟ ಶುರು ಮಾಡಿದ್ದರು.
ಸಾಲ ಮಾಡಿ ಬೈಕ್ ಕೊಡಿಸಿದ್ದ ತಾಯಿ:
ಇನ್ನು ಮಗ ದುಡಿಯುತ್ತಿದ್ದರೂ ಕೂಡ ಬೈಕ್ ಬೇಕೆಂಬ ಬೇಡಿಕೆಯನ್ನು ಮನೆಯಲ್ಲಿ ಇಟ್ಟಿದ್ದ. ಅಲ್ಲದೆ, ಇವರಿಬ್ಬರಿಗೆ ಹೊರಗಡೆ ಸುತ್ತಾಡಲು ಬೈಕ್ ಅವಶ್ಯಕತೆ ಇತ್ತು. ಈ ಕಾರಣದಿಂದಾಗಿಯೇ ಮನೆಯವರಲ್ಲಿ ಬೈಕ್ ನೀಡುವಂತೆ ತಿಳಿಸಿದ್ದ. ಅದರಂತೆ ದರ್ಶನ್ ನ ತಾಯಿ ಪುತ್ರನಿಗೆ ಸಾಲ ಮಾಡಿ ಬೈಕ್ ಕೊಡಿಸಿದ್ದರು ಎನ್ನಲಾಗಿದೆ.
ಈ ನಡುವೆ ದರ್ಶನ್ ಸುಳ್ಯದಲ್ಲಿ ತಾನು ಮೊದಲು ಕೆಲಸ ಮಾಡಿಕೊಂಡಿದ್ದ ವಸತಿ ಗೃಹದಲ್ಲಿ ರೂಮ್ ಕೇಳಿಕೊಂಡಿದ್ದ. ಪರಿಚಯದ ಮೇಲೆ ವಸತಿ ಗೃಹದ ಸಿಬ್ಬಂದಿಗಳು ರೂಮ್ ನೀಡಿದ್ದರು. ಆ ದಿನ ರೂಮಲ್ಲಿ ಉಳಿದುಕೊಂಡು ಸೋಮವಾರ ಮಧ್ಯಾಹ್ನನದ ಸಮಯ ಜೋಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವಿಷಯ ವಸತಿ ಗೃಹದ ಸಿಬ್ಬಂದಿಗಳಿಗೆ ಗೊತ್ತಾಗಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಜೋಡಿಯ ಎರಡು ಕಡೆಯವರನ್ನು ಕರೆಯಿಸಿ ಕೊಠಡಿಯ ಬಾಗಿಲು ತೆರೆದಿದ್ದರು.
ಆತ್ಮಹತ್ಯೆಗೆ ಮೊದಲು ದರ್ಶನ್ ಅವರು ಇಬ್ಬರು ಜತೆಯಾಗಿರುವ ಫೋಟೋಗಳನ್ನು ಸ್ಟೆಸ್ಟಸ್ ಗೆ ಅಪ್ ಲೋಡ್ ಮಾಡಿದ್ದ. ಅಲ್ಲದೆ ತಾನೆ ಇಬ್ಬರಿಗೂ ಶ್ರದ್ದಾಂಜಲಿ ಕೋರಿಕೊಂಡಿದ್ದ. ಇಬ್ಬರ ಶವಗಳನ್ನು ಪೊಸ್ಟ್ ಮಾರ್ಟಮ್ ಮಾಡಿ ಬಳಿಕ ವಾರಿಸುದಾರರಿಗೆ ಒಪ್ಪಿಸಲಾಯಿತು. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸದ್ಯ ಪೋಷಕರ ಹಟದಿಂದಾಗಿ ಎರಡು ಜೀವಗಳು ಬಲಿಯಾಗಿದ್ದು, ಸಾವಿಗೆ ಇನ್ನೇನಾದರು ಕಾರಣ ಇದೆಯಾ ಎಂಬುವುದು ಪೊಲೀಸ್ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.