ಮಂಗಳೂರು, ಅ 20 (DaijiworldNews/SM): ಅತ್ಯಾಚಾರಕ್ಕೆ ಯತ್ನಿಸಿದ ಯುವಕನೊಬ್ಬನಿಗೆ ತಂಡವೊಂದ ದಂಡಂ ದಶಗುಣಂ ಏನೆಂಬುವುದನ್ನು ತೋರಿಸಿಕೊಟ್ಟಿದೆ. ಇದನ್ನು ವೀಡಿಯೋ ಚಿತ್ರೀಕರಣ ಮಾಡಲಾಗಿದ್ದು, ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ, ತುಳು ಭಾಷೆಯಲ್ಲಿ ಸಂಭಾಷಣೆಯಿದ್ದು, ಎಲ್ಲಿ ನಡೆದಿರುವ ಘಟನೆ ಎಂಬುವುದು ಸ್ಪಷ್ಟಗೊಂಡಿಲ್ಲ.

ಯುವಕನೊಬ್ಬ ಯುವತಿಯೊಬ್ಬಳನ್ನು ಯಾಮಾರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಇದೇ ಕಾರಣಕ್ಕೆ ಯುವಕನನ್ನು ನಿರ್ಜನ ಪ್ರದೇಶಕ್ಕೆ ಕರೆ ತಂದು ಕೋಲಿನ ಮೂಲಕ ದಂಡಿಸಿದ್ದಾರೆ. ವೀಡಿಯೋದಲ್ಲಿರುವ ಸಂಭಾಷಣೆ ಗಮನಿಸಿದಾಗ, ‘‘ಪೊಣ್ಣು ಬೋಡಾ ನಿಕ್ಕ್?” ಎನ್ನುವ ಪ್ರಶ್ನೆ ಯುವಕರ ತಂಡ ಮಾಡಿದೆ. “ಬೊರ್ಚಿ ಅಣ್ಣಾ... ನನ ಸುದ್ದಿಗೆ ಪೋಪುಜಿ” ಎನ್ನುವ ಉತ್ತರದೊಂದಿಗೆ ಯುವಕ ಪೆಟ್ಟು ತಿಂದಿದ್ದಾನೆ. ರೇಪ್ ಮಾಡುತ್ತೀಯಾ ಎನ್ನುವ ಪ್ರಶ್ನೆ ಕೇಳುತ್ತಾ ತಂಡ ಯುವಕನಿಗೆ ಥಳಿಸಿದೆ.
ನಿರ್ಜನ ಪ್ರದೇಶದಲ್ಲಿ ಯುವಕನಿಗೆ ಥಳಿಸುವ ವೀಡಿಯೋ ವೈರಲ್ ಆಗುತ್ತಿದೆ.