ಕುಂದಾಪುರ, ಅ. 21 (DaijiworldNews/MB) : ಭಾರತೀಯ ಜನತಾ ಪಕ್ಷ ಸಿದ್ಧಾಂತ ಹಾಗೂ ವಿಚಾರ ಆಧರಿತ ರಾಜಕೀಯ ಪಕ್ಷ. ತನ್ನದೇ ಆದ ಸಿದ್ದಾಂತದಲ್ಲಿ ಮುನ್ನೆಡೆಯುತ್ತಿದೆ. ಆದರೆ ದೇಶದ ಇತರ ರಾಜಕೀಯ ಪಕ್ಷಗಳನ್ನು ಗಮನಿಸಿದರೆ ಅವು ಕುಟುಂಬದ ಆಸ್ತಿಗಳಂತೆ ಇರುವುದನ್ನು ಕಾಣಬಹುದು. ಬಿಜೆಪಿಗೆ ಪ್ರತಿಯೋಬ್ಬ ಕಾರ್ಯಕರ್ತರೂ ಆಸ್ತಿ. ಹರಿಯುವ ನೀರಿನಂತಹ ರಾಜಕೀಯ ವ್ಯವಸ್ಥೆಗೆ ಪಕ್ಷ ಸಂಘಟನೆಗಳಿಗೆ ಪೂರಕವಾಗಿ ಇಂತಹ ಕಾರ್ಯಕಾರಿಣಿಗಳ ನಡೆಯುತ್ತದೆ ಎಂದು ಬಿಜೆಪಿಯ ಉಡುಪಿ ಜಿಲ್ಲಾಧ್ಯಕ್ಷ ಸುರೇಶ ನಾಯಕ್ ಕುಯಿಲಾಡಿ ಹೇಳಿದರು.


















ಅವರು ಚಿತ್ತೂರು ಸಕಲ ಕನ್ವನ್ಶನ್ ಹಾಲ್ನಲ್ಲಿ ನಡೆದ ಬೈಂದೂರು ಮಂಡಲ ಭಾರತೀಯ ಜನತಾ ಪಾರ್ಟಿಯ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರಧಾನಿ ಮೋದಿಯವರ ದೂರದೃಷ್ಟಿಯ ಯೋಜನೆಗಳ ಇವತ್ತು ಕಟ್ಟಕಡೆಯ ವ್ಯಕ್ತಿಗೂ ತಲುಪಿದೆ. ಈ ಮೊದಲು ಕಟ್ಟಕಡೆಯ ವ್ಯಕ್ತಿ ಬ್ಯಾಂಕ್ಗಳಿಗೆ ಹೋಗುವುದೇ ಕಷ್ಟವಾಗಿತ್ತು. ಅಂತಹ ಸಂದರ್ಭದಲ್ಲಿ ಜನಧನ ಖಾತೆ ತೆರೆಯುವಂತೆ ಸೂಚಿಸಿ ಪ್ರತೀಯೋರ್ವರಿಗೂ ಬ್ಯಾಂಕ್ಗಳಲ್ಲಿ ಖಾತೆ ತೆರೆಯುವಂತೆ ಮಾಡಿ ಈಗ ಎಲ್ಲ ಸೌಲಭ್ಯಗಳು ಅದೇ ಖಾತೆಗೆ ನೇರವಾಗಿ ತಲುಪುವಂತೆ ಮಾಡಿದ್ದಾರೆ. ಸ್ವಚ್ಛ ಭಾರತ್ ಕಲ್ಪನೆ ಮಹಾತ್ಮ ಗಾಂಧಿಯವರ ಕಲ್ಪನೆಯಾದರೂ ಕೂಡಾ ಕಾಂಗ್ರೆಸಿಗೆ ಅನುಷ್ಠಾನ ಮಾಡಲಾಗಲಿಲ್ಲ. ಮೋದಿಯವರು ಸ್ವಚ್ಛ ಭಾರತ್ ಪರಿಕಲ್ಪನೆಯನ್ನು ಸಮರ್ಥವಾಗಿ ಅನುಷ್ಠಾನಿಸಿ ದೇಶದಲ್ಲಿ ಇಂದು ಸ್ಪಚ್ಚತಯೆ ಅರಿವು ಮೂಡಿಸಲಾಗಿದೆ. ಪ್ರತೀ ಮನೆಗೂ ಶೌಚಾಲಯ ನಿರ್ಮಾಣದಂತಹ ಕಾರ್ಯಗಳು ದೇಶದಲ್ಲಿ ಆಗಿವೆ ಎಂದ ಅವರು, 2004 ಅಟಲ್ ಬಿಹಾರಿ ವಾಜಪೇಯಿ ಬಳಿಕ ಕೇಂದ್ರದ ಅಧಿಕಾರ ವಹಿಸಿಕೊಂಡ ಮನಮೋಹನ ಸಿಂಗ್ ಸರ್ಕಾರದ ಹತ್ತು ವರ್ಷಗಳಲ್ಲಿ ಲಕ್ಷಾಂತರ ಕೋಟಿ ಹಗರಣಗಳು ನಡೆದವು ಎಂದರು.
ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ, ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅತೀ ಹೆಚ್ಚಿನ ಪಂಚಾಯತ್ ಗಳಲ್ಲಿ ಜಯ ಸಾಧಿಸಲಿದೆ. 39 ಪಂಚಾಯತ್ಗಳ ಪೈಕಿ ಮೂರು ಪಂಚಾಯತ್ಗಳು ಪಟ್ಟಣ ಪಂಚಾಯತ್ಗಳಾಗಿದ್ದು, ಉಳಿದ ಎಲ್ಲ ಪಂಚಾಯತ್ಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ ಬರಲಿದ್ದಾರೆ ಎಂದರು.
ವಂಡ್ಸೆ ಸ್ವಾವಲಂಬನಾ ಕೇಂದ್ರ ವಿಚಾರ ಪ್ರಸ್ತಾವಿಸಿದ ಅವರು, ಸರ್ಕಾರಿ ಕಟ್ಟಡದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಮತಿಯಿಲ್ಲದೇ ಪಂಚಾಯತ್ ಅಧಿಕಾರ ಅಧಿಕಾರ ನಿರ್ವಹಣೆ ಮಾಡುವಂತಿಲ್ಲ. ಖಾಸಗಿಯಾಗಿ ನಾಲ್ಕಾರು ಜನ ಹುಡುಗಿಯರು ಹೊಲಿಗೆ ತರಬೇತಿ ಮಾಡುತ್ತಿದ್ದರು. ಅವರಿಗೆ ಬೇರೆ ಕಡೆ ಪುನರ್ವಸತಿ ಕಲ್ಪಿಸಲಾಗಿದೆ. ಮಹಿಳೆಯರನ್ನು ಬೀದಿ ಪಾಲು ಮಾಡಿದ್ದಾರೆ ಎನ್ನುವ ಆರೋಪಗಳಿಗೆ ಹುರುಳಿಲ್ಲ. ನಾನು ಬೈಂದೂರು ಕ್ಷೇತ್ರದಲ್ಲಿ ಜನರ ಪರವಾಗಿ ಕೆಲಸ ಮಾಡುತ್ತಿದ್ದೇನೆ ಎನ್ನುವುದನ್ನು ಜನ ಗುರುತಿಸಿದ್ದಾರೆ ಎಂದರು.
ಬಿಜೆಪಿ ವಿಭಾಗೀಯ ಸಂಚಾಲಕ ಉದಯ ಕುಮಾರ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಉಪಾಧ್ಯಕ್ಷ ಶ್ರೀಶ ನಾಯಕ್ ಉಪಸ್ಥಿತರಿದ್ದರು.
ಬೈಂದೂರು ಮಂಡಲದ ಅಧ್ಯಕ್ಷ ದೀಪಕ ಕುಮಾರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಿಯದರ್ಶಿನಿ ಸ್ವಾಗತಿಸಿದರು. ಬೈಂದೂರು ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪೂಜಾರಿ ಜೆಡ್ಡು ವಂದಿಸಿದರು.