ಉಡುಪಿ, ಅ. 21 (DaijiworldNews/MB) : ನಿಲ್ಲಿಸಿದ್ದ ಕಾರಿಗೆ ಆಟೋರಿಕ್ಷಾ ಡಿಕ್ಕಿ ಹೊಡೆದು ಚಾಲಕ ಪ್ರಾಣ ಕಳೆದುಕೊಂಡ ಘಟನೆ ಅಕ್ಟೋಬರ್ 20 ರ ಮಂಗಳವಾರ ನಾಗನಬೆಟ್ಟು ಗುಂಡಿಬೈಲು ಬಳಿ ನಡೆದಿದೆ.





ಮೃತ ವ್ಯಕ್ತಿಯನ್ನು ಮುನಬೆಟ್ಟು ಮೂಲದ ಸುನಿಲ್ (44) ಎಂದು ಗುರುತಿಸಲಾಗಿದೆ. ಆಟೋರಿಕ್ಷಾ ಚಾಲನೆ ಮಾಡುವಾಗ ನಿಯಂತ್ರಣ ಕಳೆದುಕೊಂಡ ಸುನಿಲ್ ಅವರು ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.
ಆಟೋದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಆಟೋ ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ.