ಮಲ್ಪೆ,ಅ. 21 (DaijiworldNews/HR): ಮೀನುಗಾರಿಕೆಗೆ ಬಂದರಿನಿಂದ ಹೊರಟ ಬೋಟ್ ನ ಬಲೆಗೆ ಎರಡು ಬೃಹತ್ ಗಾತ್ರದ ತೊರಕೆ ಮೀನು ಬಿದ್ದಿದೆ.




ಮಂಗಳವಾರ ರಾತ್ರಿ ಮಲ್ಪೆಯ ನಾಗಸಿದ್ಧಿ ಬೋಟಿನ ಮಾಲಕರಾದ ಸುಭಾಸ್ ಅವರ ಬೋಟ್ ಗೆ ಸಿಕ್ಕಿದ ಎರಡು ತೊರಕೆ ಮೀನುಗಳನ್ನು ಕ್ರೇನ್ ನ ಸಹಾಯದಿಂದ ಬೋಟ್ ನಿಂದ ಕೆಳಕ್ಕೆ ಇಳಿಸಲಾಯಿತು.
ಸುಮಾರು 700 ಕೆಜಿ ಮತ್ತು 250 ಕೆಜಿ ತೂಕವಿದ್ದ ಮೀನನ್ನು ಬುಧವಾರ ಮಲ್ಪೆ ಬಂದರಿನಲ್ಲಿ ಇಳಿಸಲಾಯ್ತು. ಅನೇಕ ಮಂದಿ ಬೃಹತ್ ಗಾತ್ರದ ಮೀನನ್ನು ನೋಡಲೆಂದೇ ಅಲ್ಲಿ ಜಮಾಯಿಸಿದ್ದರು.
ಲಾಕ್ ಡೌನ್ ನಿಂದ ಮೀನುಗಾರರ ಬದುಕು ಸಂಕಷ್ಟಕರವಾಗಿತ್ತು . ಕರಾವಳಿಯಲ್ಲುಂಟಾಗುವ ಹವಾಮಾನ ವೈಪರೀತ್ಯದಿಂದ ರೆಡ್ ಅಲರ್ಟ್ ಅಥವಾ ಎಲ್ಲೋ ಅಲರ್ಟ್ ಸಿಗ್ನಲ್ ಘೋಷಿಸಲಾಗುತ್ತಿದೆ. ಕಡಲಿನಲ್ಲಿ ಅಲೆಯ ಅಬ್ಬರವಿಳಿತ ಇರುವುದರಿಂದ ಈ ಸಮಯ ಕಡಲಿಗೆ ಇಳಿಯುವುದು ಕೂಡ ಅಪಾಯವೇ.
ಈ ಹಿಂದೆಯೂ ಇದಕ್ಕಿಂತಲೂ ದೊಡ್ಡ ಮೀನುಗಳು ಬಲೆಗೆ ಬಿದ್ದಿವೆ. ಆದರೆ ಲಾಕ್ ಡೌನ್ ನಂತರ ಬೋಟ್ ಗೆ ಸಿಕ್ಕ ದೊಡ್ಡ ಮೀನು ಇದಾಗಿದ್ದು ಸದ್ಯ ಬಂದರಿಗೆ ತಂದಿದ್ದ ಮೀನು ಉತ್ತಮ ಬೆಲೆಗೆ ಮಾರಾಟವಾಗಿದೆ.