ಕಾರ್ಕಳ, ಅ. 21 (DaijiworldNews/MB) : ಮಾರುತಿ ಓಮ್ನಿಯಲ್ಲಿ ಬಂದ ತಂಡವೊಂದು ವಿಷವಿಕ್ಕಿದ ಸುಮಾರು 15 ಮಂಗಗಳನ್ನು ಎಸೆದು ಹೋದ ಘಟನೆ ಕಾಂತಾವರದ ಬಾರಾಡಿ ಕಂಬಳ ರಸ್ತೆಯಲ್ಲಿ ನಡೆದಿದೆ.


ಮಂಗಳವಾರ ರಾತ್ರಿ ಸುಮಾರು 7.15ರ ವೇಳೆಗೆ ಈ ಘಟನೆ ನಡೆದಿದ್ದು, ಘಟನಾ ಸ್ಥಳದಲ್ಲಿ 3 ಮಂಗಗಳು ಪ್ರಾಣತೆತ್ತಿದ್ದರೆ, ಉಳಿದ ಮಂಗಗಳು ಅರೆಪ್ರಜ್ಞಾ ಸ್ಥಿತಿಯಲ್ಲಿ ವಿವಿವಿಲಾನೆ ಹೊರಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಯಾವುದೋ ತೋಟದಲ್ಲಿ ದುಷ್ಕರ್ಮಿಗಳು ಉದ್ದೇಶ ಪೂರಕವಾಗಿ ಮಂಗಗಳಿಗೆ ವಿಷವಿಟ್ಟು ಅದರ ಸೇವನೆಗೆ ಕಾರಣರಾಗಿದ್ದು, ಘಟನಾ ಸ್ಥಳದಲ್ಲಿ ಬಿದ್ದುಕೊಂಡಿದ್ದ ಮಂಗಗಳನ್ನು ಮಾರುತಿ ಓಮ್ನಿಕಾರಿನಲ್ಲಿ ತುಂಬಿಸಿ ಬಾರಾಡಿ ಕಂಬಳದ ನಿರ್ಜನ ಪ್ರದೇಶದಲ್ಲಿ ಎಸೆದುಹೋಗಿದ್ದರು.
ಬಾರಾಡಿ ಫ್ರೆಂಡ್ಸ್ನ ಸದಸ್ಯರು ಈ ಕುರಿತು ಅರಣ್ಯ ಇಲಾಖಾಧಿಕಾರಿಗಳ ಗಮನಕ್ಕೆ ವಿಷಯತಂದಿದ್ದು, ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ತಂಡವೊಂದು ಘಟನಾ ಸ್ಥಳಕ್ಕೆ ಅಗಮಿಸಿ ಅಗತ್ಯ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಮಂಗಗಳನ್ನು ಗೂಡಿನಲ್ಲಿ ಹಾಕಿ ಕೊಂಡು ಹೋಗಿದ್ದಾರೆ.